ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಿಕಿನಿ ತೊಟ್ಟು ಮಾದಕವಾಗಿ ಪೋಸ್ ಕೊಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್‍ವುಡ್ ಸಿನಿಮಾ ಮಂದಿ ಇತ್ತಿಚೀನ ದಿನಗಳಲ್ಲಿ ಮಾಲ್ಡೀವ್ಸ್ ಪ್ರವಾಸವನ್ನು ಹೆಚ್ಚು ಮಾಡುತ್ತಿದ್ದಾರೆ. ಕಡಲ ಕಿನಾರೆಯಲ್ಲಿ ನಿಂತು ಪೋಸ್ ಕೊಟ್ಟು ಅನೇಕ ಸೆಲೆಬ್ರಿಟಿಗಳು ಫೊಟೋವನ್ನು ಶೇರ್ ಮಾಡುತ್ತಿದ್ದಾರೆ. ಇದೆ ರೀತಿಯಾಗಿ ಜಾಹ್ನವಿ ಕೂಡಾ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ.
ವರ್ಣವೈವಿಧ್ಯತೆ ಎಂದು ಬರೆದುಕೊಂಡು ಮೆಟಾಲಿಕ್ ಸ್ವಿಮ್‍ಸೂಟ್‍ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟು ಮಾಲ್ಡೀವ್ಸ್‍ನ ನೀಲಾಕಾಶದ ಕಿನಾರೆಯಲ್ಲಿ ನಿಂತು ವಿವಿಧ ಬಂಗಿಯಲ್ಲಿ ನಿಂತು ಸಖತ್ ಹಾಟ್ ಆಗಿ ಕಾಣಿಕೊಳ್ಳುವ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಬಿಕಿನಿಯಲ್ಲಿ ಶ್ರೀದೆವಿ ಪುತ್ರಿ ಜಾಹ್ನವಿಯನ್ನು ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಬಿಕಿನಿಯಲ್ಲಿ ಎಷ್ಟೊಂದು ಮುದ್ದಾಗಿ ಕಾಣುತ್ತೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
2018ರಲ್ಲಿ ದಡಕ್ ಸಿನಿಮಾದ ಮೂಲಜಕವಾಗಿ ಬಾಲಿವುಡ್ ಅಂಗಳಕ್ಕೆ ಎಂಟ್ರಿಕೊಟ್ಟ ಜಾಹ್ನವಿ ಗೋಸ್ಟ್ ಸ್ಟೋರೀಸ್, ದೋಸ್ತಾನ್2 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲವಾಗಿ ಸಿನಿಪ್ರಿಯರಿಗೆ ಹತ್ತಿರವಾಗಿದ್ದಾರೆ. ಇದೀಗ ಬಿಕಿನಿ ಫೋಟೋಗಳ ಮೂಲಕವಾಗಿ ಬಿಟೌನ್‍ನಲ್ಲಿ ಸುದ್ದಿಯಲ್ಲಿದ್ದಾರೆ.