-ಗನ್ ತೋರಿಸಿ ಗೆಳೆಯನ ಜೊತೆ ಸೇರಿ ಗ್ಯಾಂಗ್‍ರೇಪ್
-ಬಿಜೆಪಿ ಜಿಲ್ಲಾಧ್ಯಕ್ಷರ ಪುತ್ರನಾಗಿರೋ ಆರೋಪಿ
ಲಕ್ನೊ: ಬಿಎ ವಿದ್ಯಾರ್ಥಿನಿ ಗ್ಯಾಂಗ್‍ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮತ್ತು ಆತನ ಗೆಳೆಯನ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದು ವರ್ಷದ ಹಿಂದೆ ಘಟನೆ ನಡೆದಿದ್ದು ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿದ್ಯಾರ್ಥಿನಿಯನ್ನ ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ್ದಾರೆ. ಆದ್ರೆ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿಲ್ಲ.
Advertisement
ಉತ್ತರ ಪ್ರದೇಶದ ಪ್ರಯಾಗರಾಜ್ ನಗರದ ಬಿಜೆಪಿ ಮುಖಂಡ ಡಾ.ಶ್ಯಾಮ್ ಪ್ರಕಾಶ್ ದ್ವಿವೇದಿ ಮತ್ತು ಗೆಳೆಯ ಡಾ.ಅನಿಲ್ ದ್ವಿವೇದಿ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಗನ್ ತೋರಿಸಿ ವಿದ್ಯಾರ್ಥಿನಿಯ ಮೇಲೆ ಆರೊಪಿಗಳಿಬ್ಬರು ಆತ್ಯಾಚಾರ ಎಸಗುತ್ತಿದ್ದರು. ವಿಷಯ ಯಾರಿಗಾದ್ರೂ ಹೇಳಿದ್ರೆ ಕುಟುಂಬಸ್ಥರನ್ನ ಕೊಲೆ ಮಾಡಲಾಗುವುದು ಎಂದು ಆರೋಪಿಗಳು ಜೀವ ಬೆದರಿಕೆ ಹಾಕಿದ್ದರು. ಶ್ಯಾಮ್ ದ್ವಿವೇದಿ ವಿದ್ಯಾರ್ಥಿನಿಯನ್ನ ಬಲವಂತವಾಗಿ ತನ್ನ ಹೋಟೆಲಿಗೆ ಕರೆಸಿಕೊಂಡು ಗನ್ ತೋರಿಸಿ ಗೆಳೆಯ ಅನಿಲ್ ಜೊತೆ ಸೇರಿ ಅತ್ಯಾಚಾರ ಎಸಗುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ವೆಗೂ ಮುನ್ನವೇ ಪರಿಚಯವಿದ್ದ ಪತ್ನಿಯ ಸ್ನೇಹಿತನನ್ನೇ ಕೊಂದ
Advertisement
Advertisement
ಪ್ರಭಾವಿ ವ್ಯಕ್ತಿ: ಆರೋಪಿ ಶ್ಯಾಮ್ ದ್ವಿವೇದಿ ಪ್ರಯಾಗರಾಜ್ ನಗರದ ಪ್ರಭಾವಿಗಳಲ್ಲಿ ಓರ್ವ. ಸದ್ಯ ಬಿಜೆಪಿಯ ಯುವ ಮೋರ್ಚಾ ಕಾಶಿ ಪ್ರಾಂತ್ಯದ ಉಪಾಧ್ಯಕ್ಷನಾಗಿದ್ರೆ, ತಂದೆ ರಾಮರಕ್ಷ್ ದ್ವಿವೇದಿ ಪ್ರಯಾಗರಾಜ್ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಆರೋಪಿ ಶ್ಯಾಮ್ ದ್ವಿವೇದಿ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿಗಳು ಸೇರಿದಂತೆ ಹಲವು ಬಿಜೆಪಿ ಮುಖಂಡರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋಗಳಿವೆ. ಮತ್ತೋರ್ವ ಆರೋಪಿ ಡಾ. ಅನಿಲ್ ಸೋಹಬತಿಯಾಬಾಗ್ ನಲ್ಲಿ ಖಾಸಗಿ ಕ್ಲಿನಿಕ್ ಇಟ್ಟುಕೊಂಡಿದ್ದು, ಲಾಕ್‍ಡೌನ್ ಬಳಿಕ ಬಂದ್ ಆಗಿದೆ. ಪ್ರತಾಪಗಢದಲ್ಲಿ ಜಮೀನು ಮಾರಾಟ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಆರೋಪಿಗಳನ್ನ ಮೊದಲ ಬಾರಿಗೆ ಭೇಟಿಯಾಗಿದ್ದಳು. ಇದನ್ನೂ ಓದಿ: 80ರ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಟ್ರಕ್ ಡ್ರೈವರ್!
Advertisement
ಆರೋಪಗಳು ಎಲ್ಲಾ ಸುಳ್ಳು: ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿರುವ ಶ್ಯಾಮ್ ದ್ವಿವೇದಿ, ತಮ್ಮ ವಿರುದ್ಧ ಕೇಳಿ ಬಂದಿರುವ ಎಲ್ಲ ಆರೋಪಗಳು ಸುಳ್ಳು. ಇತ್ತೀಚೆಗೆ ನಾನು ಮತಾಂತರ ಆಗೋದನ್ನು ತಡೆಯುತ್ತಿದ್ದೇನೆ. ನನ್ನ ರಾಜಕೀಯ ಒಳಸಂಚು ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರೇಯಸಿಯ ರುಂಡ ಕತ್ತರಿಸಿ ಹೊಲದಲ್ಲಿ ದೇಹ ಎಸೆದ ಪ್ರಿಯಕರ