ಬಿಎಸ್‍ವೈ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಬಗ್ಗೆ ಹೇಳಿದ್ದಾರೆ: ಬಿ.ಸಿ ಪಾಟೀಲ್

Public TV
1 Min Read
b.c patil

ಹಾವೇರಿ: ಯಡಿಯೂರಪ್ಪನವರು ಸೂಕ್ತ ಸ್ಥಾನಮಾನ ಕಲ್ಪಿಸಿ ಕೊಡುವ ಬಗ್ಗೆ ಹೇಳಿದ್ದಾರೆ. ಪಕ್ಷ ಇದುವರೆಗೆ ನನ್ನನ್ನು ಚೆನ್ನಾಗಿ ನಡೆಸಿಕೊಂಡು ಬಂದಿದೆ. ಈಗಲೂ ಚೆನ್ನಾಗಿ ನಡೆಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹಿರೇಕೆರೂರಿನ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

bsy 5

ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿರಿಯರ ಬಗ್ಗೆ ಮಾತನಾಡುವುದಿಲ್ಲ. ಕೆಲವರಿಗೆ ಕೆಲವು ಕಡೆ ಅಸಮಾಧಾನ ಸಹಜ. ಹಿರಿಯರು ಅದನ್ನು ಸರಿಪಡಿಸಿಕೊಳ್ಳುತ್ತಾರೆ. ಏನು ಬರುತ್ತೆ, ಬಂದಾಗ ನೋಡೋಣ ಎಂದಿದ್ದಾರೆ.

FotoJet 2

ಮನುಷ್ಯ ಆಶಾದಾಯಕ ಆಗಿರಬೇಕು. ಊಹೆ ಮೇಲೆ ಮಾತಾಡುವುದು ಬೇಡ. ಸರ್ಕಾರ ಬಂದು ಈಗಾಗಲೇ ಒಂದು ವಾರ ಆಗಿದೆ. ಕೋವಿಡ್ ಮತ್ತು ನೆರೆ ಇರುವ ಸಂದರ್ಭದಲ್ಲಿ ಕೂಡಲೇ ಮಂತ್ರಿ ರಚನೆ ಮಾಡಬೇಕು ಎಂದು ಎಲ್ಲರ ಒತ್ತಾಯವಿದೆ. ರಾಜ್ಯದ ಭವಿಷ್ಯ ನುಡಿಯಬೇಕಾದವರು ಪ್ರಜೆಗಳೇ ಹೊರತು ಸ್ವಾಮಿಗಳು, ಧರ್ಮದರ್ಶಿಗಳಲ್ಲ. ನನಗೆ ದೊಡ್ಡ ಗುರುಗಳು ರಾಜಕೀಯ ಬರಬೇಡಿ ಅಂದಿದ್ದರು. ಕೊರೊನಾ ಬಗ್ಗೆ ಭವಿಷ್ಯ ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.

DEVEGOWDA

ಮಾಜಿ ಪ್ರಧಾನಿ ದೇವೇಗೌಡ ಅವರು ವಯಸ್ಸಿನಲ್ಲಿ ಹಿರಿಯರು, ಬಹಳ ಅನುಭವಿಗಳು. ಹಿರಿಯರು ಎನ್ನುವ ಗೌರವಕ್ಕೆ ಹೋಗಿ ಭೇಟಿ ಆಗಿದ್ದಾರೆ. ನಾನಿನ್ನೂ ಯಾವುದೇ ನಿರೀಕ್ಷೆ ಮಾಡಿಲ್ಲ. ಯಾವ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಇದೆ. ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ನಮ್ಮ ಜಿಲ್ಲೆಯವರು ಸಿಎಂ ಆಗಿರುವುದರ ಬಗ್ಗೆ ಬಹಳ ಹೆಮ್ಮೆ ಇದೆ. ಹಾವೇರಿ ಮಾತ್ರವಲ್ಲ ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಾಳೆ ಅಥವಾ ಬುಧವಾರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ: ಕೆ.ಎಸ್.ಈಶ್ವರಪ್ಪ

Share This Article
Leave a Comment

Leave a Reply

Your email address will not be published. Required fields are marked *