– ರಾಜ್ಯದ ಜನರಲ್ಲಿ ಸಿಎಂ ಮನವಿ
– ನಳಿನ್, ಸುಧಾಕರ್, ಸಿ.ಟಿ ರವಿ ಹೇಳಿದ್ದೇನು?
ಬೆಂಗಳೂರು: ಶತಶತಮಾನದ ಕನಸಿನ ರಾಮಮಂದಿರ ನಿರ್ಮಾರ್ಣಕ್ಕಾಗಿ ಅಯೋಧ್ಯೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೇರವೇರಲಿದ್ದು, ಈ ಹಿನ್ನೆಲೆಯಲ್ಲಿ ಗಣ್ಯರು ಶುಭಹಾರೈಸಿದ್ದಾರೆ.
ರಾಮ ಮಂದಿರ ನಿರ್ಮಾಣ ಸಲುವಾಗಿನ ಹೋರಾಟದಲ್ಲಿ ಮುಖ್ಯಮಂತ್ರಿ ಶ್ರೀ @BSYBJP ಹಾಗೂ ಶ್ರೀ @CTRavi_BJPರವರೊಂದಿಗೆ 18ದಿನಗಳ ಕಾಲ ಅಯೋಧ್ಯಾದಲ್ಲಿ ಭಾಗವಹಿಸಿದ್ದು ನಮಗೀಗ ತೃಪ್ತಿ ತಂದಿದೆ.
ರಾಮಮಂದಿರ ನಿರ್ಮಾಣದ ಈ ಶತಶತಮಾನಗಳ ನಮ್ಮ ಮಹದಾಸೆ ಇಂದು ಪ್ರಧಾನಿ ಶ್ರೀ @narendramodiರವರು ಭೂಮಿಪೂಜೆ ಸಲ್ಲಿಸಿ ನನಸಾಗಿಸಲಿದ್ದಾರೆ.
ಜೈ ಶ್ರೀ ರಾಮ್! pic.twitter.com/KNsMDK7CZ4
— R. Ashoka (ಆರ್. ಅಶೋಕ) (@RAshokaBJP) August 5, 2020
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಸಚಿವ ಆರ್ ಅಶೋಕ್, ರಾಮ ಮಂದಿರ ನಿರ್ಮಾಣ ಸಲುವಾಗಿನ ಹೋರಾಟದಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಹಾಗೂ ಸಿ.ಟಿ ರವಿ ಅವರೊಂದಿಗೆ 18ದಿನಗಳ ಕಾಲ ಅಯೋಧ್ಯಾದಲ್ಲಿ ಭಾಗವಹಿಸಿದ್ದು ನಮಗೀಗ ತೃಪ್ತಿ ತಂದಿದೆ. ರಾಮಮಂದಿರ ನಿರ್ಮಾಣದ ಈ ಶತಶತಮಾನಗಳ ನಮ್ಮ ಮಹದಾಸೆ ಇಂದು ಪ್ರಧಾನಿ ಮೋದಿಯವರು ಭೂಮಿಪೂಜೆ ಸಲ್ಲಿಸಿ ನನಸಾಗಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ
Advertisement
ರಾಜ್ಯದ ಜನತೆಯಲ್ಲಿ ನನ್ನ ಮನವಿ:
ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ನಾಳೆ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ಇದ್ದಲ್ಲಿಂದಲೇ ವಿಶೇಷವಾಗಿ ಪ್ರಾರ್ಥಿಸೋಣ. pic.twitter.com/uJOI51FGuU
— B.S.Yediyurappa (@BSYBJP) August 4, 2020
Advertisement
ಭೂಮಿಪೂಜೆಯ ಬಗ್ಗೆ ಮಂಗಳವಾರವೇ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿರುವ ಸಿಎಂ ಬಿಎಸ್‍ವೈ, ಪ್ರಧಾನಿ ನರೇಂದ್ರ ಮೋದಿಯವರು ನಾಳೆ(ಬುಧವಾರ) ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ಇದ್ದಲ್ಲಿಂದಲೇ ವಿಶೇಷವಾಗಿ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ
Advertisement
ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥಿಸೋಣ.#Ayodhya pic.twitter.com/a5Np26SyKG
— Nalinkumar Kateel (@nalinkateel) August 5, 2020
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮಾಡಿ, ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲರೂ, ನಾಡಿನ ಒಳಿತಿಗಾಗಿ, ಲೋಕಕಲ್ಯಾಣಕ್ಕಾಗಿ ವಿಶೇಷವಾಗಿ ಪ್ರಾರ್ಥಿಸೋಣ ಎಂದಿದ್ದಾರೆ. ಇದನ್ನೂ ಓದಿ: ಸುತ್ತ 4 ಚಿಕ್ಕ ಮಂದಿರ – ರಾಮಮಂದಿರದ ಹೊರಗಡೆ ಏನೇನು ಇರಲಿದೆ?
ಶತಕೋಟಿ ಭಾರತೀಯರ ಶತಮಾನಗಳ ಹೋರಾಟದ ಫಲ, ಅಯೋದ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರದ ಭೂಮಿಪೂಜೆಯನ್ನು ಪ್ರಧಾನಿ ಶ್ರೀ @narendramodi ರವರ ನೇತೃತ್ವದಲ್ಲಿ ನಡೆಯಲಿದೆ.
ಈ ಐತಿಹಾಸಿಕ ಶುಭ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಪ್ರಭು ಶ್ರೀರಾಮಚಂದ್ರ ಆಯುರಾರೋಗ್ಯ, ಸುಖ ಶಾಂತಿ, ನೆಮ್ಮದಿ ಕೊಡಲೆಂದು ಪ್ರಾರ್ಥಿಸುತ್ತೇನೆ.#ಜೈಶ್ರೀರಾಮ್ pic.twitter.com/8tF7WXIN6M
— C T Ravi ???????? ಸಿ ಟಿ ರವಿ (@CTRavi_BJP) August 5, 2020
ಸಚಿವ ಸಿ.ಟಿ ರವಿ, ಶತಕೋಟಿ ಭಾರತೀಯರ ಶತಮಾನಗಳ ಹೋರಾಟದ ಫಲ, ಅಯೋದ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರದ ಭೂಮಿಪೂಜೆಯನ್ನು ಪ್ರಧಾನಿಯವರ ನೇತೃತ್ವದಲ್ಲಿ ನಡೆಯಲಿದೆ. ಈ ಐತಿಹಾಸಿಕ ಶುಭ ಸಂದರ್ಭದಲ್ಲಿ ತಮ್ಮೆಲ್ಲರಿಗೂ ಪ್ರಭು ಶ್ರೀರಾಮಚಂದ್ರ ಆಯುರಾರೋಗ್ಯ, ಸುಖ ಶಾಂತಿ, ನೆಮ್ಮದಿ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಯೋಧ್ಯಾನಗರದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ, ನಮ್ಮೆಲ್ಲರ ಕನಸ್ಸನ್ನು ನನಸಾಗಿಸುತ್ತಿದ್ದಾರೆ. ಇಂದು ನಾವೆಲ್ಲರೂ ನಮ್ಮ ಮನೆ-ಮನಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸೋಣ. ʼಶೀರಾಮʼ ʼನಮೋʼ..ನಮಃ pic.twitter.com/JKC3DCJdvD
— Dr Sudhakar K (@mla_sudhakar) August 5, 2020
ಸಚಿವ ಸುಧಾಕರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಯೋಧ್ಯಾ ನಗರದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿ, ನಮ್ಮೆಲ್ಲರ ಕನಸ್ಸನ್ನು ನನಸಾಗಿಸುತ್ತಿದ್ದಾರೆ. ಇಂದು ನಾವೆಲ್ಲರೂ ನಮ್ಮ ಮನೆ-ಮನಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸೋಣ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.