ಮೈಸೂರು: ಬಿಜೆಪಿ ಮೂಲದ ಬಿಎಸ್‍ವೈ ಮಾತನ್ನೇ ಬಿಜೆಪಿ ಹೈಕಮಾಂಡ್ ಕೇಳಲಿಲ್ಲ, ಇನ್ನೂ ಜನತಾದಳ ಮೂಲದ ಬೊಮ್ಮಾಯಿ ಮಾತು ಕೇಳುತ್ತಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೊರೊನಾ 3ನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ರಾಜ್ಯ ಕೊರೊನಾ ಮೂರನೇ ಅಲೆಗೆ ಸಿಲುಕಲಿದೆ. ಸಚಿವರು ಇಲ್ಲದಿದ್ದರು ಅಧಿಕಾರಿಗಳ ಮೂಲಕ ಸಿಎಂ ಈ ಕೆಲಸ ನಿರ್ವಹಣೆ ಮಾಡಬೇಕು. ಸಚಿವರು ಇದ್ದರೆ ಅವರೇನು ಗಡಿಗೆ ಬೀಗ ಹಾಕಲು ಸಾಧ್ಯವಿಲ್ಲ. ಅಧಿಕಾರಿಗಳ ಮೂಲಕ ಈ ಕೆಲಸ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಪ್ರತಿ ಟಿಬೆಟಿಯನ್ ಕುಟುಂಬದ ಓರ್ವ ಚೀನಾ ಸೇನೆಗೆ ಸೇರ್ಪಡೆ
ಸರ್ಕಾರದ ಏಕ ವ್ಯಕ್ತಿಯಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಅನ್ನೋದು ಕೂಡ ಸತ್ಯ. ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು. ಕೇರಳ ಮಹಾರಾಷ್ಟ್ರ ದಿಂದ ಬರುವವರನ್ನು ತಡೆಯಬೇಕು. ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಸರ್ಕಾರ ಎಚ್ಚರವಹಿಸಲೇ ಬೇಕು. ಕಳೆದ ಬಾರಿಯ ನೆರೆ ಪರಿಹಾರವೇ ಇನ್ನು ಸರ್ಕಾರ ನೀಡಿಲ್ಲ. ಮನೆ ಬಿದ್ದವರಿಗೆ 10 ಸಾವಿರ ಪರಿಹಾರ ಸಹಾ ಬಂದಿಲ್ಲ. ಕೇಂದ್ರದ ಬಳಿ ರಾಜ್ಯದ ಪಾಲು ಪಡೆಯುವುದಕ್ಕೆ. ಯಡಿಯೂರಪ್ಪಗೆ ಆಗಲಿಲ್ಲ. ಇನ್ನು ಬಸವರಾಜ ಬೊಮ್ಮಾಯಿಗೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಶೋಕ್ ಜತೆ ವೈಮನಸ್ಸು ಇಲ್ಲ- ವಿ ಸೋಮಣ್ಣ
ಬಿಜೆಪಿಯಲ್ಲೇ ಬೆಳೆದ ಯಡಿಯೂರಪ್ಪಗೆ ಕೇಂದ್ರದಿಂದ ಅನುದಾನ ತರಲು ಸಾಧ್ಯವಾಗಲಿಲ್ಲ. ಇನ್ನು ಜನತಾದಳದಿಂದ ಹೋದ ಬಸವರಾಜ ಬೊಮ್ಮಾಯಿಗೆ ಆಗುತ್ತಾ? ಜನತಾದಳದಿಂದ ಹೋದವರ ಮಾತು ಬಿಜೆಪಿ ಅವರು ಕೇಳುತ್ತಾರಾ? ಎಂದು ಪ್ರಶ್ನಿಸಿದರು. ಸಚಿವ ಸಂಪುಟ ಆಗಬೇಕಿತ್ತು ನೆನ್ನೆ ಸಿಎಂ ಈ ಬಗ್ಗೆ ಚರ್ಚೆ ಮಾಡಿಲ್ಲ. ಮುಂದಿನ ಬಾರಿ ಆಗಬಹುದು. ಕೊರೊನಾ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪರಿಗಣಿಸಬೇಕು ಎಂದರು.