– ಈಗಲೇ ಜಮೀರ್ ಡ್ರಗ್ಸ್ ಪೆಡ್ಲರ್ ಅಂತ ಹೇಳಲ್ಲ
– ಜಮೀರ್ ಮಾತಿನಲ್ಲಿ ಎಷ್ಟು ಸತ್ಯ ಇರುತ್ತೆ?
ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಅವರ ಮಾತಿನಲ್ಲಿ ಎಷ್ಟು ಸತ್ಯ ಇರುತ್ತೆ? ಬಿಎಸ್ ಯಡಿಯೂರಪ್ಪನವರು ಸಿಎಂ ಆದರೆ ಅವರ ಮನೆಯಲ್ಲಿ ವಾಚ್‍ಮ್ಯಾನ್ ಆಗುತ್ತೇನೆ ಎಂದಿದ್ದರು. ವಾಚ್‍ಮ್ಯಾನ್ ಕೆಲಸ ಖಾಲಿ ಇದೆ. ಯಾವಾಗ ಮಾಚ್‍ಮ್ಯಾನ್ ಆಗುತ್ತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
Advertisement
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಟಿ ರವಿ ಅವರು, ಜಮೀರ್ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಪವರ್ ಫುಲ್ ಆಗಿದ್ದು, ಬಿಎಸ್‍ವೈ ಅವರು ಸಿಎಂ ಆಗಿ 1 ವರ್ಷ ಆಗಿದೆ. ಆದ್ದರಿಂದ ಜನ ಜಮೀರ್ ಅವರನ್ನು ಯಾವಾಗ ವಾಚ್‍ಮ್ಯಾನ್ ಆಗ್ತಿಯಾ ಎಂದು ಪ್ರಶ್ನಿಸುತ್ತಿದ್ದಾರೆ. ಈಗ ಆಸ್ತಿ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಆಸ್ತಿ ಹೇಗೆ ಬಂತು ಎಂದು ಜನರು ಈಗ ಪ್ರಶ್ನಿಸುತ್ತಿದ್ದಾರೆ. ಜಮೀರ್ ಮಾತಿನಲ್ಲಿ ಎಷ್ಟು ಸತ್ಯ ಇರುತ್ತೆ? ಎಂದು ಹೇಳಿದರು. ಇದನ್ನೂ ಓದಿ: ಭಾಸ್ಕರ್ ರಾವ್ ಜೊತೆಗೂ ರಾಹುಲ್ ಫೋಟೋ ಇದೆ, ಅವರು ಅಪರಾಧಿನಾ: ಅಶೋಕ್ ಪ್ರಶ್ನೆ
Advertisement
Advertisement
ಜಮೀರ್ ಅವರು ಕ್ಯಾಸಿನೋಗೆ ಹೋದರೆ ನೆಮ್ಮದಿ ಸಿಗುತ್ತೆ ಎಂದಿದ್ದಾರೆ. ಯಾವ ರೀತಿ ನೆಮ್ಮದಿ ಸಿಗುತ್ತೆ ಅಲ್ಲಿ ಎಂದು ಹೇಳಲಿ. ಈ ಬಗ್ಗೆ ಅವರು ಬೆಳಕು ಚೆಲ್ಲಬೇಕಿದೆ. ಅವರ ಪಾಸ್ ಪೋರ್ಟ್ ಪರಿಶೀಲನೆ ಮಾಡಿಸಬೇಕು. ಅದನ್ನು ಮುಚ್ಚಿಟ್ಟರೆ ಸಂಶಯದ ಸುಳಿಯೊಳಗೆ ಸಿಲುಕಿಕೊಳ್ಳುತ್ತೀರಿ ಎಂದು ಸಲಹೆ ಜಮೀರ್ ಅವರಿಗೆ ಸಲಹೆ ನೀಡಿದರು. ಇದನ್ನೂ ಓದಿ: ಇಂದು ರಾಗಿಣಿಗೆ ಜಾಮೀನು ಭಾಗ್ಯವಿಲ್ಲ – ಸೆ.16ಕ್ಕೆ ಮುಂದೂಡಿಕೆ
Advertisement
ಆರೋಪಿ ಫಾಝಿಲ್ ಜೊತೆ ಸಿದ್ದರಾಮಯ್ಯ ಹಾಗೂ ಜಮೀರ್ ಇರುವ ಫೋಟೋ ಪ್ರದರ್ಶಿಸಿದ ಸಿ.ಟಿ ರವಿ ಅವರು, ಈ ಫೋಟೋ ಏನು ಹೇಳುತ್ತೆ? ಈ ಫೋಟೋ ಜನ್ಮ ಜನ್ಮಾಂತರದ ಸಂಬಂಧ ಅಂತ ಹೇಳುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಎಲ್ಲಾ ಫೋಟೋದಲ್ಲಿದ್ದಾರೆ. ಇದು ಬಹಳ ಆತ್ಮೀಯ ಸಂಬಂಧ ಅಂತ ಫೋಟೋದಲ್ಲಿನ ಮುಖಭಾವ ಹೇಳುತ್ತೆ. ಇದು ಯಾವುದೋ ಕುಟುಂಬದ ಕಾರ್ಯಕ್ರಮ. ಇದು ಅಪರಿಚಿತ ಜೊತೆ ತೆಗೆಸಿಕೊಂಡಿರುವ ಫೋಟೋ ಅಂತೂ ಅಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ನಾನು ಈಗಲೇ ಜಮೀರ್ ಅವರನ್ನು ಡ್ರಗ್ಸ್ ಪೆಡ್ಲರ್ ಅಂತ ಹೇಳಲ್ಲ. ಜಮೀರ್ ಅವರು ಅಲ್ಪಸಂಖ್ಯಾತರ ಗುರಾಣಿ ಹಿಡಿದು ತಪ್ಪಿಸಿಕೊಳ್ಳೊದು ಬೇಡ. ಕಳ್ಳನ ಹೆಂಡತಿ ಯಾವತ್ತಾದರೂ ಒಂದು ದಿನ ‘ಡ್ಯಾಷ್’ ಆಗಲೇಬೇಕು. ಫೋಟೋದಲ್ಲಿ ಎಲ್ಲರೂ ಒಂದೇ ರೀತಿಯ ಟೋಪಿ ಹಾಕಿಕೊಂಡಿದ್ದು, ಅವರು ಮಾತ್ರ ಟೋಪಿ ಹಾಕಿಕೊಂಡಿದ್ದಾರಾ ಅಥವಾ ಬೇರೆಯವರಿಗೂ ಹಾಕಿದ್ದಾರಾ ಎಂಬುವುದು ತಿಳಿಯಬೇಕಿದೆ ಎಂದು ಕಿಡಿಕಾರಿದರು.