ಚಿಕ್ಕಮಗಳೂರು: ಬಿಜೆಪಿ ಪಕ್ಷದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನ ಬಿಟ್ಟು ಬೇರೆ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಲಿ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಎಸ್‍ವೈ ಪರ ಬ್ಯಾಟ್ ಬೀಸಿದ್ದಾರೆ.
ನಾಯಕತ್ವ ಬದಲಾವಣೆ ಕುರಿತಂತೆ ಮೂಡಿಗೆರೆಯಲ್ಲಿ ಮಾತನಾಡಿದ ಅವರು, ಅವರಿಂದ ಅಧಿಕಾರ ಹಾಗೂ ಬೋರ್ಡ್ ಪಡೆದವರು ಮಾತನಾಡಬೇಕು. ಯಾಕೆ ಮಾತನಾಡುತ್ತಿಲ್ಲ ಗೊತ್ತಿಲ್ಲ ಎಂದರು. ನಾಯಕತ್ವ ಬದಲಾವಣೆ ಚರ್ಚೆ ಈಗ ಅಪ್ರಸ್ತುತ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ನಮ್ಮ ವಿರೋಧವಿದೆ ಎಂದಿದ್ದಾರೆ.
ನಾನು ಕೇಂದ್ರಕ್ಕೆ ನಿಯೋಗ ಹೋಗಲು ರೆಡಿ ಇದ್ದೇನೆ. ನಾಯಕತ್ವ ಬದಲಾವಣೆಗೆ ನಮ್ಮ ವಿರೋಧವಿದೆ. ಪಕ್ಷದ ವರಿಷ್ಠರಿಗೆ ಯಡಿಯೂರಪ್ಪನವರನ್ನೇ ಮುಂದುವರೆಸಲು ಮನವಿ ಮಾಡುತ್ತೇವೆ. ನಾಯಕತ್ವ ಬದಲಾವಣೆ ದೊಡ್ಡ ವಿಚಾರವಲ್ಲ. ಆದರೆ ತೋರಿಸಲು ಬೇರೆ ಸ್ಟಾರ್ ಲೀಡರ್ ಯಾರಿದ್ದಾರೆ ಹೇಳಿದರು.
ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬರಲು ಯಡಿಯೂರಪ್ಪನವರೇ ಕಾರಣ. ಹಗಲಿರುಳು ಕಷ್ಟಪಡುತ್ತಿದ್ದಾರೆ ಈಗ ನಾಯಕತ್ವ ಬದಲಾವಣೆ ಬೇಕಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ದಕ್ಷಿಣ ಭಾರತದಲ್ಲಿ ಎರಡನೇ ಬಾರಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರೇ ಕಾರಣ. ಅವರ ನಾಯಕತ್ವ ಬದಲಾವಣೆಗೆ ನಮ್ಮ ವಿರೋಧವಿದೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.