ಹುಬ್ಬಳ್ಳಿ: ನೂರು ವರ್ಷದಲ್ಲಿ ಬಾರದ ಪ್ರವಾಹ 2019ರಲ್ಲಿ ಬಂದಿತ್ತು, ಅನೇಕ ಜಿಲ್ಲೆಗಳು ಜಲಾವೃತ ಆಗಿದ್ದವು, ಆಗ ರಸ್ತೆ, ಮನೆ ಕೊಚ್ಚಿ ಹೋಗಿದ್ದವು, ನೂರಾರು ಜನ ಸಾವನ್ನಪ್ಪಿದರು, ಲಕ್ಷಾಂತರ ಬೆಳೆ ನಷ್ಟವಾಯಿತು. ಈ ವರೆಗೆ ಅದರ ಪರಿಹಾರನ್ನೇ ಕೊಟ್ಟಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನಾನು ಈ ಬಾರಿ ಪ್ರವಾಹದ ಸ್ಥಳಗಳಾದ ಬಾಗಲಕೋಟೆ ಹಾಗೂ ಬೆಳಗಾವಿ ಪ್ರವಾಸ ಮಾಡಿದ್ದೆನೆ. ಪರಿಹಾರ ಸಿಕ್ಕಿಲ್ಲ ಎಂದು ಜನ ಹೇಳುತಿದ್ದಾರೆ. ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿಲ್ಲ, ಯಡಿಯೂರಪ್ಪ ಸಿಎಂ ಆಗಿ ಎರಡು ವರ್ಷ ಸ್ಪಂದಿಸಿಲ್ಲ. ಇಗ ಹೊಸ ಸಿಎಂ ಆಗಿದ್ದಾರೆ, ಇವರು ಏನು ಮಾಡುತ್ತಾರೆ ನೋಡೋಣ ಎಂದರು.
ನಾಡಿದ್ದು ಉತ್ತರ ಕನ್ನಡ ಜಿಲ್ಲೆಗೆ ಹೋಗುತ್ತೇನೆ, ಇಂತಹ ಸರ್ಕಾರದಿಂದ ಏನೂ ನಿರೀಕ್ಷೆ ಮಾಡಲು ಆಗಲ್ಲ, ಸುಳ್ಳು ಹೇಳುತ್ತಾರೆ ಅಷ್ಟೇ, 5 ಲಕ್ಷ ಪರಿಹಾರ ಘೋಷಿಸಿದರು. ಆದರೆ ಕೊಡಲಿಲ್ಲ ಎಂದರು.
ಜನ ಆಸ್ತಿ ಕಳೆದುಕೊಂಡಿದ್ದಾರೆ: ಡಿಕೆಶಿ
ಪಕ್ಷದ ಸ್ಥಿತಿ ಹಾಗೂ ಮಳೆಯಿಂದ ಹಾನಿಯಾದ ಬಗ್ಗೆ ಚರ್ಚೆ ಮಾಡುತ್ತೇವೆ. ಮಳೆಯಿಂದ ಆಸ್ತಿ, ಪಾಸ್ತಿ ಎಲ್ಲವನ್ನು ಇಲ್ಲಿನ ಜನರು ಕಳೆದುಕೊಂಡಿದ್ದಾರೆ. ಮುಂದೆ ಯಾವ ರೀತಿ ಇರಬೇಕು, ಹೇಗೆ ಸಹಾಯ ಮಾಡಬೇಕು ಎಂದು ಚರ್ಚೆ ಮಾಡಲಿದ್ದೇವೆ. ಎಲ್ಲ ಹಿರಿಯ ನಾಯಕರು ಇಲ್ಲಿಗೆ ಬರಲಿದ್ದಾರೆ. ಕಳೆದ 2 ವರ್ಷದಿಂದ ಜನರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ, ಅದರ ಬಗ್ಗೆ ಯಾರು ಚರ್ಚೆ ಮಾಡುತ್ತಿಲ್ಲ. ಇಲ್ಲಿನ ಸಂಸದರು ಯಾರೂ ಕೂಡ ದೆಹಲಿಯಲ್ಲಿ ಬಾಯಿ ಬಿಡುತ್ತಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು.