ಬೆಂಗಳೂರು: ಸಿಲಿಕಾನ್ ಸಿಟಿ ಜನ ಒಂದು ತಿಂಗಳು ವಾಟರ್ ಬಿಲ್ ಪಾವತಿಸಿಲ್ಲ ಜಲಮಂಡಳಿ ಅವರು ಮಾತಾನಾಡಿಸಲು ಅವಕಾಶ ಕೊಡದೇ ನೀರಿನ ಸಂಪರ್ಕ ಕಟ್ ಮಾಡುತ್ತಾರೆ. ಆದರೆ ಮಂತ್ರಿ ಮಹೋದಯರ ಕೈಯಲ್ಲಿ ಪಾಪ ಕಾಸಿಲ್ಲ ನೋಡಿ ಅವರಿಗೆ ಮಾತ್ರ ಭರ್ಜರಿ ರಿಯಾಯಿತಿ.
ಸಿಎಂ ಯಡಿಯೂರಪ್ಪ ಕ್ಯಾಬಿನೆಟ್‍ನಲ್ಲಿ ಬಡ ಮಿನಿಸ್ಟ್ರುಗಳು ನೀರಿನ ಬಿಲ್ ಕಟ್ಟೋಕೆ ಆಗದೇ ಲಕ್ಷ ಲಕ್ಷ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಸಚಿವ ಜಗದೀಶ್ ಶೆಟ್ಟರ್ ಹಾಗೂ ಶ್ರೀರಾಮುಲು ಸರ್ಕಾರಿ ಬಂಗಲೆಯ ನೀರಿನ ಬಿಲ್ ಕಟ್ಟದ ಬಗ್ಗೆ ಹೈಕೋರ್ಟ್ ವಕೀಲ ಶಶಿಕುಮಾರ್ ಆರ್ ಟಿಐ ನಲ್ಲಿ ಮಾಹಿತಿ ಹೊರಹಾಕಿದ್ದಾರೆ.
ಸಚಿವರಾದ ಜಗದೀಶ್ ಶೆಟ್ಟರ್-10,66,672 ರೂ. ಬಾಕಿ ಉಳಿಸಿಕೊಂಡಿದ್ದರೆ, ಬಿ. ಶ್ರೀರಾಮುಲು- 9,28,298 ರೂ ಬಾಕಿ ಉಳಿಸಿದ್ದಾರೆ. ಜನಸಾಮಾನ್ಯರಿಗೊಂದು ರೂಲ್ಸ್ ದೊಡ್ಡವರಿಗೊಂದು ರೂಲ್ಸ್ ಜಲಮಂಡಳಿ ಇವರ ಮನೆಯ ನೀರಿನ ಸಂಪರ್ಕವನ್ನು ಕಟ್ ಮಾಡಲಿ ಅಂತಾ ವಕೀಲ ಶಶಿಕುಮಾರ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಸರ್ಕಾರಕ್ಕೆ ಬಿಲ್- ರಾಜ್ಯದ ಶಾಸಕರ ಕೊರೊನಾ ‘ಬಿಲ್’ವಿದ್ಯೆ