ಬಿಎಸ್‍ವೈಯಂತ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಇಲ್ಲ: ಸಿದ್ದರಾಮಯ್ಯ

Public TV
2 Min Read
SIDDU

– ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ

ದಾವಣಗೆರೆ: ಬಿಎಸ್‍ವೈ ರೀತಿಯ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಎಲ್ಲೂ ಸಿಕ್ಕಿಲ್ಲ. ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡುತ್ತಾ ಬಿಎಸ್‍ವೈ ವಿರುದ್ಧ ಚಾಟಿ ಬಿಸಿದ್ದಾರೆ. ಯಡಿಯೂರಪ್ಪ ನೀನು ಚೆಕ್ ಮುಖಾಂತರ ಭ್ರಷ್ಟಾಚಾರ ಮಾಡಿದರೆ ನಿಮ್ ಮಗ ಆರ್ ಟಿಜಿಎಸ್ ಮೂಲಕ ಮಾಡ್ತಾನಲ್ಲಯ್ಯಾ ನಾಚಿಕೆಯಾಗಲ್ವಾ, ಇದು ಜನ ಪರ ಸರ್ಕಾರವಾಗಿದೆ. ಬಿಎಸ್‍ವೈ ಅವರಂತ ದುರ್ಬಲ, ಭ್ರಷ್ಟ, ಕೆಟ್ಟ ಮುಖ್ಯಮಂತ್ರಿ ಇತಿಹಾಸದಲ್ಲಿ ಎಲ್ಲೂ ಸಿಕ್ಕಿಲ್ಲ. ಆರ್ ಟಿಜಿಎಸ್ ಗಿರಾಕಿ ಈ ವಿಜಯೇಂದ್ರ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

SIDDU 1

ನಾನು ಬಿಸಿಎಂಎ ಗೆ ಮೀಸಲಾತಿ ತಂದುಕೊಟ್ಟಿದ್ದು. ಮೀಸಲಾತಿ ಇರಲಿಲ್ಲ ಎಂದರೆ ಇಲ್ಲಿ ಇರೋರಲ್ಲಿ ಯಾರೂ ಗೆಲ್ಲುತ್ತಿರಲಿಲ್ಲ. ಅಪರೇಷನ್ ಕಮಲ ಹುಟ್ಟಿದ್ದೇ ಯಡಿಯೂರಪ್ಪನ ಕಾಲದಲ್ಲಿ. ಆಪರೇಷನ್ ಜನಕ ಮಿಸ್ಟರಿ ಯಡಿಯೂರಪ್ಪನವರಾಗಿದ್ದಾರೆ ಎಂದು ಬಿಎಸ್‍ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ಬಿಎಸ್ ವೈ ಸರ್ಕಾರ ಪಾಪ ಸರ್ಕಾರ, ನೈತಿಕತೆಯಿಂದ ಬಂದಿಲ್ಲ ಅಕ್ರಮವಾಗಿ ಸರ್ಕಾರ ರಚನೆಯಾಗಿದೆ. ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು ಈಗ ಒಂದೊಂದಾಗಿ ಹೊರ ಬರುತ್ತಿದೆ. ಸಿ.ಡಿ ಬಗ್ಗೆ ತನಿಖೆ ಆಗಬೇಕು. ಸಿ.ಡಿಯಲ್ಲಿ ಏನಿದೆ ಎಂದು ತನಿಖೆಯಿಂದ ಹೊರಬರಲಿ. ಬಿಜೆಪಿಯಲ್ಲಿ ಈಗ ಕೆಲವರು ಆರೋಪ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡಿ ಇವರ ಸರ್ಕಾರ ಬಂದಿದೆ ಎಂದರು.

Siddu 3

ಕುರುಬರಿಗೆ ಎಸ್ ಟಿ ಮೀಸಲಾತಿಗಾಗಿ ಕನಕಗುರುಪೀಠದ ಸ್ವಾಮೀಜಿ ಇಂದು ಪಾದಯಾತ್ರೆ ಆರಂಭಿಸಿದ್ದಾರೆ. ಆದರೆ ನಾನು ಎಸ್ ಟಿ ವಿರೋಧಿಯಲ್ಲ. ಎಸ್ ಟಿ ಹೋರಾಟದ ಬಗ್ಗೆ ನನಗೆ ಪಾಠ ಮಾಡಲು ಈಶ್ವರಪ್ಪ ಬರುತ್ತಾರೆ. ಗೊಂಡ, ರಾಜಗೊಂಡ, ಗೊಲ್ಲ ಸಮುದಾಯವನ್ನು ಎಸ್ ಟಿಗೆ ಶಿಫಾರಸ್ಸು ಮಾಡಿದ್ದು ನಾನು ಈಶ್ವರಪ್ಪ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಎಸ್‍ಟಿ ಮೀಸಲಾತಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಈಶ್ವರಪ್ಪ ಧಮ್ ಇದ್ದರೆ ಮುಂದಿನ ಮುಖ್ಯಮಂತ್ರಿ ಅಂತ ಹೇಳಲಿ ನೋಡೋಣ ಎಂದು ಹೇಳಿದ್ದಾರೆ.

SIDDU

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಮೀಸಲಾತಿ ಪಡೆಯಬಹುದಲ್ಲ. ದೆಹಲಿಯಲ್ಲಿ ಕೂತು ಎಸ್‍ಟಿ ಮೀಸಲಾತಿ ಮಾಡಿಸೋದು ಬಿಟ್ಟು, ಪಾದಯಾತ್ರೆ ಮಾಡ್ತಾರಂತೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ನಾಟಕ ಆಡ್ತೀರೇನ್ರೀ.. ಮೀಸಲಾತಿಗೆ ಕಾಂಗ್ರೆಸ್ ವಿರೋಧವಿಲ್ಲ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *