ಬೆಂಗಳೂರು: ಕಳೆದ 15 ದಿನಗಳಿಂದ ನಡೆಯುತ್ತಿದ್ದ ಸಾರಿಗೆ ಮುಷ್ಕರ ಕೊನೆಗೂ ಅಂತ್ಯವಾಗಿದೆ. 15 ದಿನ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ಮಾಸಿಕ ಬಸ್ ಪಾಸ್ ಮಾನ್ಯತಾ ಅವಧಿಯನ್ನ ಬಿಎಂಟಿಸಿ ವಿಸ್ತರಣೆ ಮಾಡಿದೆ.
ಏಪ್ರಿಲ್ ತಿಂಗಳಲ್ಲಿ ಪಾಸ್ ಪಡೆದವರಿಗೆ ಸಾರಿಗೆ ಮುಷ್ಕರದಿಂದ ಅನಾನುಕೂಲ ಆಗಿತ್ತು. ಬಸ್ ಪಾಸ್ ಪಡೆದಿದ್ದರೂ ಅನಿವಾರ್ಯ ಖಾಸಗಿ ವಾಹನಗಳಲ್ಲಿ ಸಂಚರಿಸುವಂತಾಗಿತ್ತು. ಪಾಸ್ ಪಡೆದವರಿಗಾಗಿ ಮೇ 16 ರವರೆಗೆ ಪಾಸ್ ಮಾನ್ಯತಾವಧಿ ವಿಸ್ತರಣೆ ಮಾಡಿ ಪ್ರಯಾಣಿಕರ ಮೇಲೆ ಭಾರವನ್ನ ಬಿಎಂಟಿಸಿ ಇಳಿಸಿದೆ.
Advertisement
Advertisement
ಹೈಕೋರ್ಟ್ ಸೂಚನೆಗೆ ಬೆಲೆ ಕೊಟ್ಟು ಅನಿರ್ದಿಷ್ಟಾವಧಿ ಮುಷ್ಕರವನ್ನು ತಾತ್ಕಲಿಕವಾಗಿ ಹಿಂಪಡೆಯುತ್ತಿರುವುದಾಗಿ ಸಾರಿಗೆ ನೌಕರರ ಒಕ್ಕೂಟ ಪ್ರಕಟಿಸಿದೆ. ಕೋರ್ಟ್ ಆದೇಶದ ನಂತ್ರ ಅನೇಕ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. ಆದರೆ ಇನ್ಮುಂದೆ ಮುಷ್ಕರದಲ್ಲಿ ಪಾಲ್ಗೊಳ್ಳಲ್ಲ ಎಂದು ನೌಕರರಿಂದ ಸರ್ಕಾರ ಮುಚ್ಚಳಿಕೆ ಬರೆಸಿಕೊಳ್ಳುತ್ತಿದೆ. ಈ ಮೂಲಕ ನೌಕರರ ಮೂಲಭೂತ ಹಕ್ಕನ್ನೇ ಕಿತ್ತುಕೊಳ್ತಿದೆ. ಈ ಕ್ರಮ ಆಗಬಾರದು. ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
Advertisement
Advertisement
ಮುಷ್ಕರದ ವೇಳೆ ಕೈಗೊಂಡ ವಜಾ, ಅಮಾನತು, ವರ್ಗಾವಣೆ, ಶೋಕಾಸ್ ನೋಟಿಸ್ ಆದೇಶಗಳನ್ನು ವಾಪಸ್ ಪಡೆಯಬೇಕು.. ಡಿಸೆಂಬರ್ 14ರಂದು ನೀಡಿದ್ದ ಭರವಸೆ ಪ್ರಕಾರ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ರು. ಮುಂದೆ ಸರ್ಕಾರ ಯಾವೆಲ್ಲಾ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದನ್ನು ಆಧರಿಸಿ ನಮ್ಮ ಹೋರಾಟವನ್ನು ಮುಂದುವರೆಸ್ತೀವಿ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.
ಈ ಬೆನ್ನಲ್ಲೇ ಹೆಚ್ಚು ಬಸ್‍ಗಳು ರಸ್ತೆಗೆ ಇಳಿದಿವೆ. ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಬಸ್‍ಗಳು ಓಡಾಡಲಿವೆ. ಇವತ್ತಿಂದ ಟಫ್ ರೂಲ್ಸ್ ಜಾರಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜನ ತಮ್ಮೂರುಗಳ ಕಡೆ ಮುಖ ಮಾಡಿದ್ದಾರೆ. ಮೆಜೆಸ್ಟಿಕ್, ಗೊರಗುಂಟೆ ಪಾಳ್ಯ, ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಎಂದಿಗಿಂತಲೂ ಹೆಚ್ಚು ಪ್ರಯಾಣಿಕರು ಕಂಡು ಬಂದರು.