ಬೆಂಗಳೂರು: ಬಿಎಂಟಿಸಿ ಬಸ್‍ಗಳನ್ನು ಪುನಾರಂಭಿಸುವಂತೆ ಬೆಂಗಳೂರಿನ ಹಲವು ಒಕ್ಕೂಟಗಳು ಸಿಎಂ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
Advertisement
ಕೊರೊನಾ ಲಾಕ್‍ಡೌನ್ ನಿಂದ ರಾಜ್ಯದ ನಾಲ್ಕು ನಿಗಮಗಳ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಆದರೆ ಜೂನ್ 14ರಿಂದ ಅನ್‍ಲಾಕ್ ಪಾರ್ಟ್-1 ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಸೇವೆ ಪುನರಾಂಭಿಸುವಂತೆ ಬೆಂಗಳೂರಿನ ಹಲವು ಒಕ್ಕೂಟಗಳು ಸಿಎಂ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ. ಬಿಎಂಟಿಸಿ ಬಸ್ ಗಳನ್ನು ಆದ್ಯತೆಯ ಮೇರೆಗೆ ಪುನರಾರಂಭಿಸಿ ಎಂದು ಒತ್ತಾಯ ಮಾಡಿದ್ದಾರೆ.
Advertisement
Advertisement
ಕೊರೊನಾ ಲಾಕ್‍ಡೌನ್ ನಲ್ಲಿ ಸಾವಿರಾರು ಜನ ಕೆಲಸವಿಲ್ಲದೆ ಪರದಾಡಿದ್ದಾರೆ. ಈಗ ಕಟ್ಟಡ ನಿರ್ಮಾಣ ಕಾರ್ಮಿಕರು, ಭದ್ರತಾ ಸಿಬ್ಬಂದಿ, ಆಸ್ಪತ್ರೆ ಸೌಲಭ್ಯಗಳ ಸಿಬ್ಬಂದಿಗಳು, ಗೃಹಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತೆ ಕೆಲಸ ಆರಂಭಿಸಿದ್ದಾರೆ. ಆದರೆ ಕೆಲಸಕ್ಕೆ ಹೋಗಲು ಬಸ್ಸುಗಳು ಇಲ್ಲ. ಬಸ್ ಇಲ್ಲದೇ ಕೆಲಸಕ್ಕೆ ಹೇಗೆ ಹೋಗುವುದು? ಕೆಲಸಕ್ಕೆ ಹೋಗಲು ಸ್ವಂತ ವಾಹನವಿಲ್ಲ. ತಕ್ಷಣವೇ 6,300 ಬಸ್ಸುಗಳನ್ನು ಆರಂಭಿಸಬೇಕು. ಜೊತೆಗೆ ಬಸ್ಸುಗಳ ಟಿಕೆಟ್ ದರಗಳನ್ನು ರೂ.5 ಹಾಗೂ ರೂ.10ರಂತೆ ಕೇವಲ ಒಂದು ಅಥವಾ ಎರಡು ನಿಗದಿತ/ ಫ್ಲ್ಯಾಟ್ ದರಗಳಿಗೆ ಕಡಿಮೆಗೊಳಿಸಬೇಕು ಹಾಗೂ ಬಸ್ ಪಾಸ್ ಖರೀದಿಸಿದ ಪ್ರಯಾಣಿಕರಿಗೆ ಪರಿಹಾರ ನೀಡಬೇಕೆಂದು ಪತ್ರದಲ್ಲಿ ಆಗ್ರಹ ಮಾಡಲಾಗಿದೆ. ಇದನ್ನೂ ಓದಿ: ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ
Advertisement
ಈ ಪತ್ರವನ್ನು ಪ್ರಮುಖವಾಗಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ, ಗಾರ್ಮೆಂಟ್ಸ್ ಹಾಗೂ ಟೆಕ್ಸ್ ಟೈಲ್ ವರ್ಕರ್ಸ್ ಯೂನಿಯನ್, ಕರ್ನಾಟಕ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್, ಅಖಿಲ ಕರ್ನಾಟಕ ವಯೋವೃದ್ದರ ಒಕ್ಕೂಟ, ಮನೆ ಗೆಲಸ ಕಾರ್ಮಿಕರ ಯೂನಿಯನ್, ಡೊಮೆಸ್ಟಿಕ್ ವರ್ಕರ್ಸ್ ರೈಟ್ಸ್ ಯೂನಿಯನ್, ಕರ್ನಾಟಕ ಸ್ಲಂ ಜನರ ಸಂಘಟನೆ,ಸಾವಿತ್ರಿ ಬಾಯಿ ಫುಲೆ ಮಹಿಳಾ ಸಂಘಟನೆ, ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಬರೆಯಲಾಗಿದೆ. ಇದನ್ನೂ ಓದಿ: 300 ಚೀಲ ನಕಲಿ ರಸಗೊಬ್ಬರ ಪತ್ತೆ