ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಕರ ನೂಕುನುಗ್ಗಲಾಟ- ಅವ್ಯವಸ್ಥೆ ತೋರಿಸಿದ್ರೆ ಸಾರಿಗೆ ಸಚಿವರ ದೌಲತ್ತು!

Public TV
2 Min Read
bmtc 4

-ಕೊರೊನಾ ಭಯದಿಂದ ಡ್ರೈವರ್, ಕಂಡಕ್ಟರ್ ಚಕ್ಕರ್

ಬೆಂಗಳೂರು: ಕೇವಲ ಏಳು ದಿನಕ್ಕೆ ಬಿಎಂಟಿಸಿ ಲಾಕ್‍ಡೌನ್ ನಿಯಮಗಳನ್ನು ಬ್ರೇಕ್ ಮಾಡಿದೆ. ಇದನ್ನ ಸರಿ ಮಾಡಬೇಕಾದ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಮಾತ್ರ ಅವ್ಯವಸ್ಥೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಸಚಿವರ ಮಾತುಗಳನ್ನು ಕೇಳಿದ್ರೆ ಜನರ ಪ್ರಾಣಕ್ಕಿಂತ ಆದಾಯವೇ ಹೆಚ್ಚಾಯ್ತಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತದೆ.

bmtc 6

ರಾಜ್ಯದಲ್ಲಿ ಲಾಕ್‍ಡೌನ್ ರಿಲೀಫ್ ಸಿಕ್ಕಾಗ ಜನ ಬಿಂದಾಸ್ ಆಗಿ ಎಲ್ಲೆಂದರಲ್ಲಿ ಓಡಾಡೋಕೆ ಶುರುಮಾಡಿದರು. ನಂತರದ ದಿನಗಳಲ್ಲಿ ಒಂದಷ್ಟು ನಿಯಮಗಳನ್ನ ಹಾಕಿ ಸಾರ್ವಜನಿಕ ಸಾರಿಗೆ ಸಂಪರ್ಕಕ್ಕೂ ಅವಕಾಶ ಕೊಡಲಾಯ್ತು. ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್‍ಗಳು ನಿಯಮದೊಂದಿಗೆ ರಸ್ತೆಗಿಳಿದವು. 2 ಸೀಟ್‍ನಲ್ಲಿ ಒಬ್ಬರು, ಮೂರು ಸೀಟ್‍ನಲ್ಲಿ ಒಬ್ಬರು ಕೂತು ಪ್ರಯಾಣಿಸಬೇಕೆಂಬ ನಿಯಮ ಇತ್ತು. ರೂಲ್ಸ್ ಗಳು ಚೆನ್ನಾಗಿ ಕಟ್ಟುನಿಟ್ಟಾಗಿ ಪಾಲನೆ ಆಗ್ತಿತ್ತು. ಆದರೆ ಕೇವಲ ಏಳು ದಿನಕ್ಕೆ ನಿಯಮಗಳೆಲ್ಲಾ ಬಸ್‍ಗಳ ಚಕ್ರದಡಿಗೆ ಬಿದ್ದೋಗಿದೆ ಅಂತ ಅನ್ನಿಸುತ್ತಿದೆ.

bmtc 5

ಬಿಎಂಟಿಸಿ ಬಸ್‍ನಲ್ಲಿ ಮೊದ ಮೊದಲು ಸಾಮಾಜಿಕ ಅಂತರ ಕಾಪಾಡಿದ್ದ ಪ್ರಯಾಣಿಕರು, ಈಗ ಅಂಟಿಕೊಂಡೇ ಪ್ರಯಾಣಿಸ್ತಿದ್ದಾರೆ. ಬಿಎಂಟಿಸಿ ಕೂಡ ರೀತಿ ರಿವಾಜುಗಳನ್ನು ಗಾಳಿಗೆ ತೂರಿ ಹೆಚ್ಚು ಜನರನ್ನು ಹತ್ತಿಸಿಕೊಳ್ಳುತ್ತಿದೆ. ಬಿಎಂಟಿಸಿ ಬಸ್‍ನ 40 ಸೀಟ್‍ಗಳು ಫುಲ್ ಆಗಿ ರಾರಾಜಿಸ್ತಿವೆ. ಅಲ್ಲದೇ ಕೆಲ ಬಸ್‍ಗಳು ಲಾಕ್‍ಡೌನ್ ಮುನ್ನದ ದಿನಗಳಂತೆ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿವೆ.

bmtc 3

ಅವ್ಯವಸ್ಥೆಯ ಸಮರ್ಥನೆ: ಕೊರೊನಾ ಸಮಯದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಜನರ ಪ್ರಾಣಕ್ಕಿಂತ ಆದಾಯವೇ ಹೆಚ್ಚಾಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಬಿಎಂಟಿಸಿ ಅವ್ಯವಸ್ಥೆ ಬಗ್ಗೆ ನಿರಂತರವಾಗಿ ಸುದ್ದಿ ಪ್ರಸಾರ ಮಾಡುತ್ತಿರುವ ಪಬ್ಲಿಕ್ ಟಿವಿಗೆ ಸವದಿ ದವಲತ್ತಿನ ಮಾತನಾಡಿದ್ದಾರೆ. ಬೈಕ್ ಮೇಲೆ ಮೂವರು ಹೋಗ್ತಾರೆ. ಫ್ಲೈಟ್‍ನಲ್ಲಿ ಅಕ್ಕ-ಪಕ್ಕ ಕೂತು ಹೋಗ್ತಾರೆ. ಅದನ್ನು ನೀವು ಪ್ರಶ್ನೆ ಮಾಡುವುದಿಲ್ಲ. ನಮ್ಮ ಮೇಲೆ ಯಾಕೆ ಮಾಧ್ಯಮದವರಿಗೆ ಕಣ್ಣು ಎಂದು ಬಿಎಂಟಿಸಿ ಅವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದಾರೆ.

laxman savadi

ಕೊರೊನಾ ಭಯಕ್ಕೆ ಬಿಎಂಟಿಸಿ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಲಾಕ್‍ಡೌನ್ ಆದಾಗ ಎಲ್ಲಾ ನಿರ್ವಾಹಕರು ಮತ್ತು ಚಾಲಕರು ಊರು ಸೇರಿದ್ರು. ನಂತರ ಈಗ ಬಸ್ ಓಡಾಡೋಕೆ ಶುರುವಾದ್ರು ಕೂಡ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಕರ್ತವ್ಯಕ್ಕೆ ಹಾಜರಾಗದಿದ್ರೆ ಸಂಬಳ ಕೊಡಲ್ಲ ಅಂತ ಬಿಎಂಟಿಸಿ ಎಚ್ಚರಿಕೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *