ಬಿಗ್‍ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಬಿಗ್‍ಬಾಸ್ ನೀಡುವ ಆಟಗಳು ಮನೆಯಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಮೂಡಿಸುತ್ತಿದೆ. ಆದರೆ ಈ ನಡುವೆ ಬಿಗ್‍ಬಾಸ್ ಮನೆಯ ಒಬ್ಬ ಸ್ಪರ್ಧಿಯ ಬೇಡಿಕೆ ಕೇಳಿ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.
ಹೌದು ಬಿಗ್‍ಬಾಸ್ ಮನೆಯಲ್ಲಿ ಶಮಂತ್ ಹಲವು ದಿನಗಳಿಂದ ಬಿಗ್‍ಬಾಸ್ ಮುಂದೆ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಆದರೆ ಬಿಗ್‍ಬಾಸ್ ಶಮಂತ್‍ನ ಬೇಡಿಕೆ ಕೇಳುತ್ತಿದ್ದಂತೆ ಕ್ಯಾಮೆರಾಗಳೆಲ್ಲಾ ತಲೆಕೆಳಗೆ ಮಾಡಿವೆ. ಶಮಂತ್ ಈ ವಿಚಾರವನ್ನು ಅರವಿಂದ್ ಮತ್ತು ದಿವ್ಯಾ ಬಳಿ ಹೇಳಿದ್ದಾರೆ. ಆ ಅವರು ಜೋರಾಗಿ ನಕ್ಕಿದ್ದಾರೆ. ನೋಡಿ ನಾನು ಕ್ಯಾಮೆರಾ ಮುಂದೆ ಹೋಗಿ ನಿಲ್ಲುತ್ತೇನೆ ಹೇಗೆ ತಲೆಕೆಳಗೆ ಹಾಕುತ್ತಾರೆ ಎಂದು ಹೇಳಿದ್ದಾನೆ ಅದರಂತೆ ಶಮಂತ್ ಮನವಿ ಕೇಳಿದ ಬಿಗ್‍ಬಾಸ್ ಕ್ಯಾಮೆರಾಗಳು ತಲೆ ಕೆಳಗೆ ಹಾಕಿವೆ.
ಬಿಗ್‍ಬಾಸ್ ಬೆಳಗ್ಗೆ ಒಂದು ಸಾಂಗ್ ಹಾಕುತ್ತೀರಾ ಅಲ್ಲವಾ ಅದಕ್ಕೆ ಬಾ ಗುರು… ಸಾಂಗ್ ಒಮ್ಮೆ ಹಾಕಿ ಬಿಗ್‍ಬಾಸ್ ಎಂದು ಶಮಂತ್ ಬಿಗ್‍ಬಾಸ್ ಕ್ಯಾಮೆರಾಬಳಿ ಸಾಕಷ್ಟು ಬಾರಿ ರಿಕ್ವೆಸ್ಟ್ ಮಾಡಿದ್ದಾರೆ. ಶಮಂತ್ ಹೋದಾಗಲೇಲ್ಲಾ ಕ್ಯಾಮೆರಾಗಳು ತಲೆ ಕೆಳಗೆ ಹಾಕಿವೆ. ಇದು ಮನೆ ಮಂದಿಯನ್ನು ನಗೆಗಡಲಲ್ಲಿ ತೆಲುವಂತೆ ಮಾಡಿದೆ.
ಬಿಗ್‍ಬಾಸ್ ಸ್ಪರ್ಧಿಗಳ ಬೇಡಿಕೆಯನ್ನು ಕೆಲವೊಮ್ಮೆ ಈಡೇರಿಸುತ್ತಾರೆ. ಶಮಂತ್ ಬೇಡಿಕೆ ಮುಂದೆ ಆದ್ರೂ ಇಡೇರುತ್ತಾ ? ಬಿಗ್‍ಬಾಸ್ ಮನೆಯಲ್ಲಿ ಬಾ ಗುರು ಸಾಂಗ್ ಪ್ಲೇ ಆಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ವಾರಾಂತ್ಯದ ಕಾರ್ಯಕ್ರಮದಲ್ಲಿ ಇಂದು ಸುದೀಪ್ ಪಾಲ್ಗೊಳ್ಳುವುದಿಲ್ಲ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಹೇಗಿರಲಿದೆ. ಯಾರು ಮನೆಯಿಂದ ಆಚೆಹೋಗಲಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಏನೇಲ್ಲಾ ಹೊಸ ಬದಲಾವಣೆಗಳಾಗಲಿವೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕು.