ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅವರ ನೆನಪಿನಲ್ಲಿ ಧ್ರುವ ಸರ್ಜಾರ ಪತ್ನಿ ಪ್ರೇರಣಾ ಸರ್ಜಾ ಅವರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಚಿರು ಸಾವನ್ನಪ್ಪಿದ ಬಳಿಕ ಕುಟುಂಬ ಮಾತ್ರ ಅವರ ನೆನಪಿನ ಸಾಗರದಲ್ಲಿ ಮುಳುಗಿದೆ. ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ ಚಿರುವನ್ನು ನೆನೆದು ಕಣ್ಣೀರು ಹಾಕುತ್ತಿದೆ. ಇದೇ ವೇಳೆ ಬಾವನ ನೆನಪಿನಲ್ಲಿ ಪ್ರೇರಣಾ ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Advertisement
https://www.instagram.com/p/CCGR4nTguX6/
Advertisement
ಚಿರಂಜೀವಿ ಸರ್ಜಾ ಅವರ ಜೊತೆಗೆ ಫನ್ನಿಯಾಗಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಪ್ರೇರಣಾ, ನಾವು ಈ ವಿಡಿಯೋವನ್ನು ತಮಾಷೆಗಾಗಿ ಮಾಡಿದ್ದೇವೆ. ನಾನು ಯಾವುತ್ತೂ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈಗ ನನ್ನ ಬಳಿ ಇರುವ ವಿಡಿಯೋದಲ್ಲಿ ಈ ವಿಡಿಯೋ ಅತ್ಯಂತ ಅಮೂಲ್ಯವಾದ್ದು ಎಂದು ಬರೆದು ಚಿರು ಎಂದು ಹಾರ್ಟ್ ಇಮೋಜಿ ಹಾಕಿ ಇನ್ಸ್ಟಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
https://www.instagram.com/p/CBXHYnkgZIx/
Advertisement
ಲಾಕ್ಡೌನ್ ವೇಳೆ ಮನೆಯವರ ಜೊತೆ ಕಾಲಕಳೆಯುತ್ತಾ, ಆಟವಾಡುತ್ತಾ ಚೆನ್ನಾಗಿದ್ದ ಚಿರು, ಬಹುವೇಗವಾಗಿ ನಮ್ಮನ್ನು ಅಗಲುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಆದರೆ ಹೃದಯಾಘಾತಕ್ಕೆ ಒಳಗಾದ ಚಿರು, ಜೂನ್ 07ರಂದು ಚಿರನಿದ್ರೆಗೆ ಜಾರಿಬಿಟ್ಟಿದ್ದರು. ಈ ಮೂಲಕ ತೋಳಿಗೆ ತೋಳು ಕೊಟ್ಟು ಜೊತೆಗೆ ನಿಂತಿದ್ದ ತಮ್ಮ, 10 ವರ್ಷ ಪ್ರೀತಿಸಿ ಮದುವೆಯಾಗಿದ್ದ ಪತ್ನಿ, ಜೇನುಗೂಡಿನಂತ ಕೂಡುಕುಟುಂಬವನ್ನು ಬಿಟ್ಟು ಹೋಗಿದ್ದಾರೆ.
ಪ್ರೀತಿಸಿ ಮದುವೆಯಾದ ಚಿರುವನ್ನು ಕಳೆದುಕೊಂಡು ಅವರ ಪ್ರತಿರೂಪವನ್ನು ಉದರದಲ್ಲಿ ಅಪ್ಪಿಕೊಂಡು ಮೇಘನಾ ಅವರು ದಿನದೂಡುತ್ತಿದ್ದಾರೆ. ಪತಿಯ ಹೆಸರು ತನ್ನ ಹೆಸರಿನಲ್ಲಿ ಬೆರೆತು ಹೋಗಲಿ ಎಂದು ಇತ್ತೀಚೆಗಷ್ಟೇ ಮೇಘನಾ ರಾಜ್ ಎಂದು ಇದ್ದ ಅವರ ಹೆಸರನ್ನು ಮೇಘನಾ ರಾಜ್ ಸರ್ಜಾ ಎಂದು ಬದಲಿಸಿಕೊಂಡಿದ್ದಾರೆ. ಚಿರು ಬಿಟ್ಟು ಹೋದ ನೆನಪುಗಳನ್ನು ಬಿಗಿದಪ್ಪಿಕೊಂಡು ಮಗುವಿನ ರೂಪದಲ್ಲಿ ಚಿರು ಹಬ್ಬೆಗಾಲಿಟ್ಟು ಬರುವುದನ್ನು ಕಾಯುತ್ತಿದ್ದಾರೆ.
ಇತ್ತ ಅಣ್ಣ ಕೊನೆಯವರೆಗೂ ನನ್ನ ಕಣ್ಣಮುಂದೆ ಇರಲಿ ಎಂದು ತನ್ನದೇ ತೋಟದಲ್ಲಿ ಅಣ್ಣನ ಅಂತ್ಯಸಂಸ್ಕಾರ ಮಾಡಿದ ನಟ ಧ್ರುವ ಸರ್ಜಾ, ಅಣ್ಣನ ನೆನಪಿನಲ್ಲಿ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸೋತು ಕೂತಿರುವ ಅತ್ತಿಗೆಯ ನೆರವಿಗೆ ನಿಂತಿದ್ದಾರೆ. ಇತ್ತ ಮಗನಂತಿದ್ದ ತಂಗಿಯ ಮಗನನ್ನು ಕಳೆದಕೊಂಡ ನಟ ಅರ್ಜುನ್ ಸರ್ಜಾ ಮಿಸ್ ಯೂ ಮೈ ಬಾಯ್ ವಿಧಿ ತುಂಬಾ ಕ್ರೂರಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.