ನವದೆಹಲಿ: ಅಂಬೆಗಾಲಿಡುವ ಮಗು ಬಾಲ್ಕನಿಯಲ್ಲಿದ್ದ ಕಂಬದ ಮೇಲೆ ಕೈ ಇಟ್ಟು ಇಣುಕಿ ನೋಡುತ್ತಿದ್ದಾಗ ಬೆಕ್ಕು ತಡೆದು ಮಗುವಿನ ಪ್ರಾಣ ಉಳಿಸುತ್ತಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರ ಮನ ಗೆಲ್ಲುತ್ತಿದೆ. ಈ ವೀಡಿಯೋ ತುಣಕನ್ನು ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಅಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ ಅಂಬೆಗಾಲಿಡುತ್ತಿರುವ ಮಗುವೊಂದು ಬಾಲ್ಕಾನಿಯಲ್ಲಿ ನಿಂತು ಹೊರಗೆ ನೋಡಲು ಅಲ್ಲಿದ್ದ ಕಂಬವನ್ನು ಹಿಡಿದು ಹತ್ತಲು ಪ್ರಯತ್ನಿಸುತ್ತಿರುವ ವೇಳೆ ಅಲ್ಲಿಯೇ ಕುಳಿತಿದ್ದ ಬೆಕ್ಕು ಮಗುವನ್ನು ಅಪಾಯದಿಂದ ರಕ್ಷಿಸುವ ಸಲುವಾಗಿ ರೇಲಿಂಗ್ ಮೇಲೆ ಇಟ್ಟಿದ್ದ ಆತನ ಕೈಗಳನ್ನು ಬಿಡಿಸಿದೆ. ಅಲ್ಲದೆ ಬಾಲ್ಕನಿ ಹಳಿಗಳ ಗೋಡೆ ಮೇಲೆ ನಡೆಯುವ ಮೂಲಕ ಬೆಕ್ಕು ತನ್ನ ಪ್ರಾಣವನ್ನು ಲೆಕ್ಕಿಸದೇ, ಮಗು ಕೆಳಗೆ ಇಣುಕಿ ನೋಡುವುದನ್ನು ತಡೆದಿದೆ.
https://twitter.com/SudhaRamenIFS/status/1353192960972759042
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದಂತೆಯೇ ಸಾವಿರಕ್ಕೂ ಅಧಿಕ ಲೈಕ್ಸ್ ಮತ್ತು ಕಮೆಂಟ್ ಗಳು ಹರಿದು ಬಂದಿದ್ದು, ಕೆಲವರು ವೀಡಿಯೋವನ್ನು ಅದ್ಭುತ ಎಂದು ಕಮೆಂಟ್ ಮಾಡಿದರೆ ಇನ್ನೂ ಕೆಲವರು ಮಗುವಿನ ಪೋಷಕರ ಬೇಜವಾಬ್ದಾರಿ ಕುರಿತಂತೆ ಟೀಕಿಸಿದ್ದಾರೆ.