ಮುಂಬೈ: ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ದಿವಂಗತ ನಟ ರಿಷಿ ಕಪೂರ್ ಅವರ ಸಹೋದರ ಹಾಗೂ ಬಾಲಿವುಡ್‍ನ ಖ್ಯಾತ ಹಿರಿಯ ನಟ ರಾಜೀವ್ ಕಪೂರ್ (58) ಚೆಂಬೂರಿನಲ್ಲಿರುವ ಇಲೆಕ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Shocked to hear about #RajivKapoor ‘s passing. Deepest condolences to the Kapoor family.
— Sunny Deol (@iamsunnydeol) February 9, 2021
ಎದೆನೋವು ಕಾಣಿಸಿಕೊಂಡ ಕೂಡಲೇ ರಣಧೀರ್ ಕಪೂರ್ ಅವರು ರಾಜೀವ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ನೀಡುವ ಮೊದಲೇ ರಾಜೀವ್ ಇಹಲೋಕ ತ್ಯಜಿಸಿದ್ದಾರೆ. ತಮ್ಮನ ಸಾವಿನ ಸುದ್ದಿಯನ್ನು ರಣಧೀರ್ ಕಪೂರ್ ಖಚಿತ ಪಡಿಸಿದ್ದಾರೆ.
View this post on Instagram
ರಾಜ್‍ಕಪೂರ್ ಅವರ ಕಿರಿಯ ಮಗ ರಾಜೀವ್ ಕಪೂರ್ 1983 ರಲ್ಲಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ರಂಜಿಸಿದ್ದರು. 1990ರಲ್ಲಿ ತೆರೆಕಂಡ ಜಿಮ್ಮೆದಾರ್ ಸಿನಿಮಾ ನಂತರ ರಾಜೀವ್ ಅವರು ನಿರ್ದೇಶನ ಹಾಗೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು.
Saddened by the news of passing of actor, director and a producer Shri #RajivKapoor ji.
My prayers are with his family. #OmShanti pic.twitter.com/QcjxPMcm3h
— B Sriramulu (@sriramulubjp) February 9, 2021
ರಾಜೀವ್ ಕಪೂರ್ ಅವರ ಅಗಲಿಕೆಗೆ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.