ಮುಂಬೈ: ಸರ್ಬಜಿತ್ ಸಿನಿಮಾ ಖ್ಯಾತಿಯ ನಟ ರಂಜನ್ ಸೆಹಗಲ್ ಇಂದು ನಿಧನರಾಗಿದ್ದಾರೆ. ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ರಂಜನ್ ಗುರುತಿಸಿಕೊಂಡಿದ್ದರು. ರಂಜನ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.
ರಣ್‍ದೀಪ್ ಹುಡಾ ಮತ್ತು ಐಶ್ವರ್ಯಾ ರೈ ಬಚ್ಚನ್ ನಟನೆಯ ಸರ್ಬಜಿತ್ ಚಿತ್ರದಲ್ಲಿ ರಂಜನ್ ನಟಿಸಿದ್ದರು. ಪಂಜಾಬಿಯ ಹಲವು ಚಿತ್ರಗಳಲ್ಲಿ ನಟಿಸಿದ್ದ ರಂಜನ್ ಗೆ 2017ರಲ್ಲಿ ಬಿಡುಗಡೆಯಾಗಿದ್ದ ‘ಮಾಹಿ ಎನ್‍ಆರ್‍ಐ’ ಮತ್ತು 2014ರಲ್ಲಿ ತೆರೆಕಂಡಿದ್ದ ‘ಯಾರ್ ದಾ ಕ್ಯಾಚಪ್’ ಹೆಸರು ತಂದು ಕೊಟ್ಟಿದ್ದವು.
https://www.instagram.com/p/BWt6sJHDVGR/
ಪಂಜಾಬ್ ಮೂಲದವರಾದ ರಂಜನ್ ಚಂಡೀಗಢನಲ್ಲಿ ವಾಸವಾಗಿದ್ದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಥಿಯಟರ್ ಸ್ಟಡಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದುಕೊಂಡು ಮುಂಬೈಗೆ ಬಂದಿದ್ದರು. ರಿಶತೋ ಸೇ ಬಡಿ ಪ್ರಥಾ, ತುಮ್ ದೇನಾ ಸಾಥ್ ಮೇರಾ ಧಾರವಾಹಿಗಳಲ್ಲಿ ಅವಕಾಶ ಪಡೆದುಕೊಂಡಿದ್ದರು. ತದನಂತರ ಕ್ರೈಂ ಪೆಟ್ರೋಲ್ ಮತ್ತು ಸಾವಧಾನ್ ಇಂಡಿಯಾ ಸಂಚಿಕೆಗಳಲ್ಲಿ ರಂಜನ್ ನಟಿಸಿದ್ದರು.
https://www.instagram.com/p/BSLWNlMjplm/
2014ರಲ್ಲಿ ಕಾಸ್ಟ್ಯೂಮ್ ಡಿಸೆನರ್ ನಿವ್ಯಾ ಚಾಬ್ಡಾ ಅವರನ್ನು ಮದುವೆಯಾಗಿದ್ದರು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಂಜನ್ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
https://www.instagram.com/p/BB2NK6xCbzu/

