ಮುಂಬೈ: ಬಾಲಿವುಡ್ ಆ್ಯಕ್ಷನ್ ಕಿಂಗ್ ನಟ ಅಕ್ಷಯ್ ಕುಮಾರ್ಗೆ ಕೊರೊನಾ ದೃಢಪಟ್ಟಿದೆ. ಸದ್ಯ ಈ ಕುರಿತಂತೆ ಅಕ್ಷಯ್ ಕುಮಾರ್ ಭಾನುವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ನನಗೆ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ ಎಂದು ಹೇಳಲು ಇಷ್ಟಪಡುತ್ತೇನೆ. ಸದ್ಯ ಕೋವಿಡ್‍ನ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದು, ಪ್ರತ್ಯೇಕವಾಗಿ ಹೋಂ ಕ್ವಾರಂಟೈನ್‍ನಲ್ಲಿದ್ದೇನೆ ಹಾಗೂ ಅಗತ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ಕೋವಿಡ್ ಪರೀಕ್ಷೆಗೆ ತಮ್ಮನ್ನು ತಾವು ಒಳಪಡಿಸಿಕೊಳ್ಳಬೇಕೆಂದು ವಿನಂತಿಸುತ್ತೇನೆ ಹಾಗೂ ಜಾಗೃತರಾಗಿರಿ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಆ್ಯಕ್ಷನ್ ಮೂಲಕ ಮತ್ತೆ ಹಿಂದಿರುಗುತ್ತೇನೆ ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ.
???????? pic.twitter.com/w9Q7m54BUN
— Akshay Kumar (@akshaykumar) April 4, 2021
ರಾಮಸೇತು ಸಿನಿಮಾದ ಶೂಟಿಂಗ್ ವೇಳೆ ಬ್ಯುಸಿಯಾಗಿದ್ದಾಗ ನಟ ಅಕ್ಷಯ್ ಕುಮಾರ್ಗೆ ಕೊರೊನಾ ಸೋಂಕು ತಗುಲಿದೆ. ಈ ಸಿನಿಮಾದಲ್ಲಿ ಅಕ್ಷಯ್ ಪುರಾತತ್ವ ಶಾಸ್ತ್ರಜ್ಞರಾಗಿ ಅಭಿನಯಿಸುತ್ತಿದ್ದು, ಕಳೆದ ತಿಂಗಳು ಅಕ್ಷಯ್ ಸಹ ನಟರಾದ ನುಶ್ರಾಟ್ ಬರುಚಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಅಯೋಧ್ಯೆಗೆ ತೆರಳಿ ಸಿನಿಮಾದ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
View this post on Instagram
ಪೃಥ್ವಿರಾಜ್, ಬಚ್ಚನ್ ಪಾಂಡೆ ಮತ್ತು ರಕ್ಷ ಬಂಧನ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಕ್ಷಯ್ ಕಾಣಿಸಿಕೊಳ್ಳಲಿದ್ದಾರೆ.