ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಇತರ ಐದು ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ ನಂತರ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಂಡಿದೆ. ಇದನ್ನೂ ಓದಿ: ರಿಯಾಗೆ ನಾನೆಂದೂ ಸುಶಾಂತ್‍ನನ್ನು ಬಿಟ್ಟು ಬರೋಕೆ ಹೇಳಿರಲಿಲ್ಲ: ಮಹೇಶ್ ಭಟ್
Advertisement
ಸುಶಾಂತ್ ಸಿಂಗ್ ಸಾವನ್ನಪ್ಪಿದ ಒಂದು ತಿಂಗಳ ನಂತರ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್, ರಿಯಾ ವಿರುದ್ಧ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ನಟ ಬಾಲಿವುಡ್‍ಗೆ ಬೈ ಹೇಳಿ ಸಾವಯವ ಕೃಷಿಯನ್ನು ಮಾಡಲು ಕೊಡಗಿಗೆ ಹೋಗಲು ಬಯಸಿದ್ದರು. ಆದರೆ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಕೊಡಗಿಗೆ ಹೋಗಿ ಕೃಷಿ ಮಾಡಲು ಅವಕಾಶ ನೀಡಲಿಲ್ಲ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸ್ತಿದ್ದ ರಿಯಾ
Advertisement
Advertisement
ಎಫ್ಐಆರ್‌ನಲ್ಲಿ ಏನಿದೆ?
ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್‍ನಲ್ಲಿ ತಮ್ಮ ವೃತ್ತಿಜೀವನವನ್ನು ತ್ಯಜಿಸಿ ತಮ್ಮ ಸ್ನೇಹಿತ ಮಹೇಶ್ ಅವರೊಂದಿಗೆ ಸೇರಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದರು. ಆದರೆ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್‍ಗೆ ಕೃಷಿ ಮಾಡಲು ಅನುಮತಿ ಕೊಟ್ಟಿಲ್ಲ. ಜೊತೆಗೆ ಮುಂಬೈನಲ್ಲೇ ಸುಶಾಂತ್ ಸಿಂಗ್‍ನನ್ನು ಉಳಿಯುವಂತೆ ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ಅವರ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದಾಗಿ ರಿಯಾ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ಕೊಟ್ಟಿದ್ದಾಳೆ: ಸುಶಾಂತ್ ತಂದೆ ಗಂಭೀರ ಆರೋಪ
Advertisement
ಒಂದು ವೇಳೆ ಸುಶಾಂತ್ ಸಿಂಗ್ ಮಾನಸಿಕ ಸ್ಥಿತಿ ಜಗತ್ತಿಗೆ ಬಹಿರಂಗವಾದರೆ, ಯಾವುದೇ ಕೆಲಸ ಸಿಗುವುದಿಲ್ಲ ಮತ್ತು ನಿರುದ್ಯೋಗಿ ಆಗಬಹುದು ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ ರಿಯಾ ಚಕ್ರವರ್ತಿ ನಗದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‍ಗಳು, ಅವುಗಳ ಪಿನ್ ನಂಬರ್, ಸುಶಾಂತ್ ಸಿಂಗ್ ಅವರ ವೈದ್ಯಕೀಯ ವರದಿಗಳು, ಲ್ಯಾಪ್‍ಟಾಪ್ ಮತ್ತು ಆಭರಣಗಳು ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಮನೆಯಿಂದ ಹೊರ ಹೋಗಿದ್ದರು. ಮನೆಯಿಂದ ಹೋಗುವ ಮುನ್ನ ರಿಯಾ, ಸುಶಾಂತ್ ಸಿಂಗ್ ಮೊಬೈಲ್ ನಂಬರ್ ಕೂಡ ಬ್ಲಾಕ್ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.
2020 ಜೂನ್ 8 ರಂದು ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾಲಿಯನ್ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಸುಶಾಂತ್ ಸಿಂಗ್ ಅವರ ಮನಸ್ಸಿನ ಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು. ಈ ಸಮಯದಲ್ಲಿ ಸುಶಾಂತ್ ತನ್ನ ಸಹೋದರಿಗೆ ಫೋನ್ ಮಾಡಿ ಮಾತನಾಡಿದ್ದರು. ಅಲ್ಲದೇ ಸುಶಾಂತ್ ಸಿಂಗ್ ಮನೆಯ ಸಿಬ್ಬಂದಿಯನ್ನು ರಿಯಾ ಚಕ್ರವರ್ತಿ ಬದಲಿಸಿದ್ದು, ತಮಗೆ ಗೊತ್ತಿರುವವರನ್ನು ಸೇರಿಸಿದ್ದರು ಎಂದು ದೂರಿನಲ್ಲಿ ಅನೇಕ ವಿಚಾರಗಳನ್ನು ಉಲ್ಲೇಖಿಸಿದ್ದಾರೆ.
ಕೊನೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಬ್ಯಾಂಕ್ ಖಾತೆಯಿಂದ 15 ಕೋಟಿ ರೂ. ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ 15 ಕೋಟಿ ಹಣ ವರ್ಗಾವಣೆಯ ಬಗ್ಗೆ ತನಿಖೆಯ ಮಾಡಲು ಬಿಹಾರ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ.