ಕನ್ನಡತಿ ಶ್ರೀಲೀಲಾ (Sreeleela) ‘ಪುಷ್ಪ 2’ನಲ್ಲಿ (Pushpa 2) ಸೊಂಟ ಬಳುಕಿಸಿದ್ಮೇಲೆ ಬಾಲಿವುಡ್ನಿಂದ ಬಂಪರ್ ಆಫರ್ಸ್ ಅರಸಿ ಬರುತ್ತಿವೆ. ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ನಾಯಕಿ ಎಂಬ ಸುದ್ದಿ ಹಬ್ಬಿತ್ತು. ಈ ವಿಚಾರಕ್ಕೆ ಪುಷ್ಠಿ ನೀಡುವಂತಹ ಫೋಟೋವೊಂದು ಸಿಕ್ಕಿದೆ. ಸಿದ್ಧಾರ್ಥ್ ಸಿನಿಮಾವನ್ನು ನಿರ್ಮಿಸಲಿರುವ ನಿರ್ಮಾಪಕನ ಜೊತೆ ಶ್ರೀಲೀಲಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದನ್ನೂ ಓದಿ:ಪಾಕಿಸ್ತಾನದ ನಟನ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ?- ಪ್ರಕಾಶ್ ರಾಜ್ ಕೆಂಡ
ಶ್ರೀಲೀಲಾ ಅವರು ನಿರ್ಮಾಪಕ ಮಹಾವೀರ್ ಜೈನ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರು ರಾಜ್ ಶಾಂಡಿಲ್ಯ ನಿರ್ದೇಶನ ಮಾಡುತ್ತಿರುವ ಮುಂದಿನ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರಕ್ಕೆ ಸಿದ್ದಾರ್ಥ್ ಮಲ್ಹೋತ್ರ ನಾಯಕ. ಇದೀಗ ವೈರಲ್ ಆಗಿರೋ ಫೋಟೋದಿಂದ ಶ್ರೀಲೀಲಾ ಅವರು ಸಿದ್ಧಾರ್ಥ್ ಮಲ್ಹೋತ್ರಾ ಚಿತ್ರದಲ್ಲಿ ನಟಿಸೋದು ಬಹುತೇಕ ಖಚಿತ ಆದಂತೆ ಕಾಣುತ್ತಿದೆ. ಮಹಾವೀರ್ ಜೈನ್ (Mahaveer Jain) ಅವರು ಇನ್ಸ್ಟಾಗ್ರಾಂನಲ್ಲಿ ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾಗೆ ಚಾಲನೆ ಸಿಗಲಿದೆ. ಇದನ್ನೂ ಓದಿ:ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ನಾಮಿನೇಷನ್ ಪ್ರಕಟ – ಯಾರ ಪಾಲಾಗಲಿದೆ ಅವಾರ್ಡ್?
ಅಂದಹಾಗೆ ಶ್ರೀಲೀಲಾ ಪ್ರಸ್ತುತ ಕಾರ್ತಿಕ್ ಆರ್ಯನ್ ಜೊತೆಗಿನ ‘ಆಶಿಕಿ 3’ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಸಿನಿಮಾವನ್ನು ಅನುರಾಗ್ ಬಸು ನಿರ್ದೇಶನ ಮಾಡುತ್ತಿದ್ದಾರೆ.
ಈ ಸಿನಿಮಾದ ಜೊತೆ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗಾಗಿ ಇಬ್ಬರಿಗೂ ವರ್ಕ್ ಶಾಪ್ ಮಾಡಲಾಗುತ್ತಿದೆ. ಸ್ಕ್ರೀಪ್ಟ್ಗೆ ತಯಾರಿ ಮಾಡಲಾಗುತ್ತಿದೆ. ಈ ಜೋಡಿಯ ಮೂಲಕ ಭಿನ್ನವಾಗಿರೋ ಲವ್ ಸ್ಟೋರಿ ಹೇಳಲು ನಿರ್ದೇಶಕರು ಸಜ್ಜಾಗಿದ್ದಾರೆ.
ಕನ್ನಡದ ಕಿಸ್, ಭರಾಟೆ, ಬೈಟು ಲವ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಶ್ರೀಲೀಲಾ ಸಿನಿಮಾ ಕೆರಿಯರ್ ಶುರು ಮಾಡಿದರು. ‘ಪೆಳ್ಳಿ ಸಂದಡಿ’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟರು. ‘ಪುಷ್ಪ 2’ (Pushpa 2) ಚಿತ್ರದಲ್ಲಿನ್ ಕಿಸ್ಸಿಕ್ ಸಾಂಗ್ನಿಂದ ನಟಿ ಮತ್ತಷ್ಟು ಫೇಮಸ್ ಆಗಿ ಈಗ ಬಾಲಿವುಡ್ನಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.