ಮಂಡ್ಯ: ಬಾಲಕಿಯ ರಿಪೋರ್ಟ್‌ನಲ್ಲಿ ಅದಲು ಬದಲು ಮಾಡುವ ಮೂಲಕ ಮಂಡ್ಯ ಜಿಲ್ಲಾಡಳಿತದ ಮಹಾ ಎಡವಟ್ಟು ಮಾಡಿಕೊಂಡಿದೆಯಾ ಎಂಬ ಅನುಮಾನ ಮೂಡಿದೆ. ಕೊರೊನಾ ಪಾಸಿಟಿವ್ ಬಂದ ಬಾಲಕಿಯನ್ನು ಕ್ವಾರಂಟೈನ್ ಮಾಡಿ, ನೆಗೆಟಿವ್ ಬಂದ ಬಾಲಕಿಯನ್ನು ಐಸೋಲೇಶನ್ ವಾರ್ಡಿಗೆ ಶಿಫ್ಟ್ ಮಾಡಿದೆ.
ಮುಂಬೈನಿಂದ ಬಂದಿದ್ದ ಬಾಲಕಿ ಹಾಸ್ಟೆಲ್ ಕ್ವಾರಂಟೈನ್‍ಗೆ, ರಾಣಿಬೆನ್ನೂರಿನಿಂದ ಬಂದಿದ್ದ ಬಾಲಕಿಯನ್ನು ಐಸೋಲೇಶನ್ ವಾರ್ಡಿಗೆ ಕಳುಹಿಸಲಾಗಿದೆ. ಇಬ್ಬರೂ ಬಾಲಕಿಯರು ಪೋಷಕರ ಜೊತೆ ಪಾಂಡವಪುರ ತಾಲೂಕಿಗೆ ಬಂದಿದ್ದರು. ಮೇ 18ರಂದು ಇಬ್ಬರು ಬಾಲಕಿಯರಿಗೆ ತಪಾಸಣೆ ಮಾಡಲಾಗಿತ್ತು. ರಾಣಿಬೆನ್ನೂರಿನಿಂದ ಬಂದ ಬಾಲಕಿಗೆ 11 ವರ್ಷ, ಮುಂಬೈನಿಂದ ಬಂದಿದ್ದ ಬಾಲಕಿಗೆ 7 ವರ್ಷ. ಮೇ 21ರಂದು ಇಬ್ಬರ ವರದಿ ಬಂದಿತ್ತು. ಇಬ್ಬರ ವರದಿ ಪೈಕಿ ಓರ್ವ ಬಾಲಕಿಗೆ ಕೊರೊನಾ ಪಾಸಿಟಿವ್ ಬಂದಿದೆ.
Advertisement
Advertisement
ರೋಗಿ 1475 ಮೇ 21ರಂದು ಪಾಸಿಟಿವ್ ಬಂದಿದೆ. ಇದು ಮುಂಬೈನಿಂದ ಬಂದ ಬಾಲಕಿಯ ರಿಪೋರ್ಟ್ ಆಗಿದೆ. ಆದರೆ ಜಿಲ್ಲಾಡಳಿತ ರಾಣಿಬೆನ್ನೂರಿನಿಂದ ಬಂದ ಬಾಲಕಿಗೆ ಪಾಸಿಟಿವ್ ಬಂದಿದೆ ಎಂದು ಗುರುತು ಮಾಡಿದೆ. ನಂತರ ರಾಣಿಬೆನ್ನೂರಿನಿಂದ ಬಂದ ಬಾಲಕಿಯನ್ನು ಐಸೋಲೇಶನ್ ವಾರ್ಡಿಗೆ ಶಿಫ್ಟ್ ಮಾಡಿದ್ದು, ಮುಂಬೈ ಬಾಲಕಿಯನ್ನು ಕ್ವಾರಂಟೈನ್ ಕೇಂದ್ರದಲ್ಲೇ ಜಿಲ್ಲಾಡಳಿತ ಉಳಿಸಿದೆ. ಮೇ 24 ರಂದು ಮುಂಬೈ ಬಾಲಕಿಗೆ ಪಾಸಿಟಿವ್ ಬಂದಿದೆ. ಆ ಬಾಲಕಿಗೆ ಪಾಸಿಟಿವ್ ಇದೆ, ರೋಗಿ 2020 ಎಂದು ಗುರುತು ಮಾಡಿದೆ. ಆದರೆ ಮುಂಬೈನಿಂದ ಬಾಲಕಿಗೆ 21ರಂದು ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ಹೇಳಿತ್ತು.
Advertisement
ಜಿಲ್ಲಾಡಳಿತದ ಎಡವಟ್ಟಿನ ಕಹಾನಿ:
ಹೆಲ್ತ್ ಬುಲೆಟಿನ್‍ನಲ್ಲಿ ನಮೂದಾಗಿರುವ ಟ್ರಾವೆಲ್ ಹಿಸ್ಟರಿ ಅನುಮಾನಕ್ಕೆ ಕಾರಣವಾಗಿದೆ. ದಿನಾಂಕ 21 ರಂದು ಪ್ರಕಟವಾಗಿದ್ದ ರೋಗಿ 1475 ಸೋಂಕಿತ ಬಾಲಕಿ ಹಾಗೂ 24 ಪ್ರಕಟವಾಗಿರುವ ರೋಗಿ 2020ರ ಬಾಲಕಿ ಒಬ್ಬಳೇನಾ ಅಥವಾ ಸೋಂಕು ತಗುಲಿರುವುದು ಒಬ್ಬರಿಗೆ, ಚಿಕಿತ್ಸೆ ನೀಡಿದ್ದು ಮತ್ತೊಬ್ಬರಿಗಾ ಎಂಬ ಅನುಮಾನ ಮೂಡಿದೆ.
Advertisement
21ರ ಹೆಲ್ತ್ ಬುಲೆಟಿನ್ ಪ್ರಕಾರ ಸೋಂಕಿತ ಬಾಲಕಿಗೆ 7 ವರ್ಷ, ಮುಂಬೈನಿಂದ ಬಂದಿರುವ ಟ್ರಾವಲ್ ಹಿಸ್ಟರಿ ಇದೆ. 24ರ ಹೆಲ್ತ್ ಬುಲೆಟಿನ್‍ನಲ್ಲೂ 2020ರ ಸಂಖ್ಯೆಯ ಬಾಲಕಿಗೂ ಏಳು ವರ್ಷ ಮುಂಬೈನಿಂದ ಬಂದಿರುವ ಟ್ರಾವೆಲ್ ಹಿಸ್ಟರಿ ಇದೆ. 21 ರಂದೇ ಬಾಲಕಿಗೆ ಪಾಸಿಟಿವ್ ಬಂದಿದ್ದರೆ ಆಕೆಯನ್ನ ಐಶೋಲೇಷನ್ ವಾರ್ಡಿಗೆ ಕರೆತರದೆ ಹಾಸ್ಟೆಲ್ ಕ್ವಾರಂಟೈನ್‍ನಲ್ಲಿ ಇಟ್ಟಿದ್ದು ಯಾಕೆ ಎಂಬ ಅನುಮಾನ ಮೂಡಿದೆ.
ಬಾಲಕಿಯನ್ನ ಗುರುತಿಸುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿಕೊಂಡಿದ್ದು, ಪಾಸಿಟಿವ್ ಬಂದಿರುವ ಬಾಲಕಿಯನ್ನ ಹಾಸ್ಟೆಲ್ ಕ್ವಾರಂಟೈನ್‍ನಲ್ಲಿ ಇಟ್ಟು, ನೆಗೆಟಿವ್ ಬಂದಿದ್ದ ಬಾಲಕಿಯನ್ನ ಐಶೋಲೇಷನ್ ವಾರ್ಡಿಗೆ ಶಿಫ್ಟ್ ಮಾಡಿದ್ದಾರೆ. ರಾಣಿಬೆನ್ನೂರು ಟ್ರಾವಲ್ ಹಿಸ್ಟರಿ ಹೊಂದಿರುವ 11 ವರ್ಷದ ಬಾಲಕಿಗೆ ಪಾಸಿಟಿವ್ ಎಂದು ಜಿಲ್ಲಾಡಳಿತ ಚಿಕಿತ್ಸೆ ನೀಡುತ್ತಿದೆ. ಇಬ್ಬರು ಬಾಲಕಿಯ ಗಂಟಲು ದ್ರವ ಒಂದೇ ದಿನ ಒಂದೇ ಸಮಯದಲ್ಲಿ ತೆಗೆದು ಟೆಸ್ಟ್ ಗೆ ಕಳುಹಿಸಿದ್ದರಿಂದ ಎಡವಟ್ಟು ಆಗಿದೆ ಎನ್ನಲಾಗಿದೆ.
11 ವರ್ಷದ ಬಾಲಕಿ ಮೇ 17ರಂದು ತನ್ನ ಕುಟುಂಬದ ಜತೆ ರಾಣೆ ಬೆನ್ನೂರಿನಿಂದ ಚಿನಕುರುಳಿಗೆ ಬಂದಿದ್ದಳು. ಜಿಲ್ಲೆ ಪಾಂಡವಪುರ ತಾಲೂಕಿನ ನಾರಾಯಣಪುರ ಗ್ರಾಮದ ಬಾಲಕಿ ಮೇ 13 ರಂದು ತಮ್ಮ ಕುಟುಂಬಸ್ಥರ ಜೊತೆ ಮುಂಬೈನಿಂದ ಬಂದಿದ್ದಳು. ಇಬ್ಬರು ಬಾಲಕಿಯ ಕುಟುಂಬಸ್ಥರಿಗೆ ಮೇ 18 ರಂದು ಪಾಂಡವಪುರದಲ್ಲಿ ಕೊವಿಡ್ ಟೆಸ್ಟ್ ನಡೆಸಲಾಗಿತ್ತು. ಈ ವೇಳೆ ಇಲಾಖೆಯ ಅಧಿಕಾರಿಗಳು ಎಡವಟ್ಟು ಮಡಿದ್ದು, ಬಾಲಕಿಯರನ್ನ ಅದಲು ಬದಲಾಗಿ ಗುರುತಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕ್ವಾರಂಟೈನ್ ನಲ್ಲಿರಬೇಕಾದ ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಬಾಲಕಿ ಕ್ವಾರಂಟೈನ್‍ಗೆ ಹೋಗಿದ್ದಾಳೆ.
ಮುಂಬೈ ಟ್ರಾವಲ್ ಹಿಸ್ಟರಿ ಹೊಂದಿದ್ದ ಬಾಲಕಿಗೆ ನೆಗೆಟಿವ್ ಬಂದಿದೆ ಅನ್ನೋದು ನಂಬದೆ ಮತ್ತೆ ಟೆಸ್ಟ್ ಮಾಡುವಂತೆ ಶಾಸಕ ಸಿ.ಎಸ್.ಪುಟ್ಟರಾಜು ಒತ್ತಾಯಿಸಿದ್ದಾರೆ. ಪುಟ್ಟರಾಜು ಒತ್ತಾಯಕ್ಕೆ ಮಣಿದು ಟೆಸ್ಟ್ ನಡೆಸಿದಾಗ ಆಕೆಗೆ ಪಾಸಿಟಿವ್ ಬಂದಿದೆ. ಇತ್ತ ಸರ್ಕಾರ ಬಿಡುಗಡೆ ಮಾಡಿರುವ 2 ಹೆಲ್ತ್ ಬುಲೆಟಿನ್‍ನಲ್ಲಿ ಎಲ್ಲೂ 11 ವರ್ಷದ ಬಾಲಕಿಗೆ ಪಾಸಿಟಿವ್ ಇದೆ ಅನ್ನೋ ಪ್ರಸ್ತಾಪ ಇಲ್ಲ. ಹೀಗಾಗಿ ಅಧಿಕಾರಿಗಳು ಎಡವಟ್ಟು ಬಹಿರಂಗವಾಗಿದೆ. ಈ ಪ್ರಕರಣ ಕುರಿತು ಸಮಗ್ರ ತನಿಖೆಗೆ ಮಾಡಬೇಕು ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.