ಜೈಪುರ: ಯುವಕನೊಬ್ಬ 5 ವರ್ಷದ ಬಾಕಿಯ ಮೇಲೆ ಅತ್ಯಾಚಾರವೆಸಗಿದ್ದು, ಪ್ರಸ್ತುತ ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ರಾಜಸ್ಥಾನ ಬರನ್ ಜಿಲ್ಲೆಯ ಶಹಬಾದ್ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ನಿನ್ನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳವಾರ ರಾತ್ರಿ ಬಾಲಕಿಗೆ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೊಟದಲ್ಲಿರುವ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಯಿತು ಎಂದು ಶಹಬಾದ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಬಾಲಕಿಗೆ ಒಂದು ಸರ್ಜರಿ ನಡೆದಿದ್ದು, ಇನ್ನೆರಡು ಸರ್ಜರಿ ನಡೆಯಲಿದೆ. ಬಾಲಕಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಮನೆಯ ಹೊರಗಡೆ ಮೂತ್ರವಿಸರ್ಜನೆಗಾಗಿ ತೆರಳಿದ್ದಳು. ಈ ವೇಳೆ ಮದ್ಯದ ನಶೆಯಲ್ಲಿದ್ದ ಕಾಮುಕ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಯನ್ನು ಕಟ್ಟಡವೊಂದರ ಒಳಗಡೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಎಸ್ ಹೆಚ್ ಒ ಹರಿಪ್ರಸಾದ್ ರಾಣಾ ತಿಳಿಸಿದ್ದಾರೆ.
ಇತ್ತ ತನ್ನ ಅತ್ಯಾಚಾರ ಆಗಿದೆ ಎಂಬುದನ್ನು ಅರಿಯದ ಮುಗ್ಧ ಕಂದಮ್ಮ ಮನೆಗೆ ಅಳುತ್ತಲೇ ಬಂದಿದ್ದಾಳೆ. ಅದಾಗಲೇ ಆಕೆಗೆ ರಕ್ತಸ್ತಾವ ಊಡ ಆಗುತ್ತಿದ್ದು, ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಬಾಲಕಿಯ ಪೋಷಕರು ಸ್ಥಳೀಯ ಪೊಲಿಸ್ ಠಾಣೆಗೆ ತೆರಳಿ ದೂರು ದಾಲಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.