ವೆಲ್ಲಿಂಗ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಧರಿಸಿದ್ದ ಬಟ್ಟೆಯನ್ನು, ಎಂಟು ವರ್ಷದ ಬಾಲಕಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಹರಾಜಿಗಿಡುವ ಮೂಲಕ ಟಿಮ್ ಸೌಥಿ ಮಾನವೀಯತೆ ಮೆರೆದಿದ್ದಾರೆ.
Advertisement
ನ್ಯೂಜಿಲೆಂಡ್‍ನಲ್ಲಿ 8 ವರ್ಷದ ಬಾಲಕಿ ಹಾಲ್ಲೀ ಬೀಟಿಯಾ ನ್ಯೂರೋಬ್ಲಾಸ್ಟೊಮಾ ಎಂಬ ಅಪರೂಪದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು 2018ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನು ತಿಳಿದ ನ್ಯೂಜಿಲೆಂಡ್ ತಂಡದ ಹಿರಿಯ ವೇಗಿ ಟಿಮ್ ಸೌಥಿ ಆ ಬಾಲಕಿಯ ಚಿಕಿತ್ಸೆಗೆ ನೆರವಾಗಲು ಡಬ್ಲ್ಯುಟಿಸಿ ಫೈನಲ್‍ನಲ್ಲಿ ತಾನು ಧರಿಸಿದ್ದ ಬಟ್ಟೆಯೊಂದನ್ನು ಹರಾಜಿಗೆ ಇಟ್ಟಿದ್ದಾರೆ. ಹರಾಜಿನಲ್ಲಿ ಬಂದ ಹಣವನ್ನು ಆ ಬಾಲಕಿಯ ಚಿಕಿತ್ಸೆಗೆ ಭರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕೊನೆಗೂ ಕನಸು ನನಸು: ಐಸಿಸಿ ಟೆಸ್ಟ್ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್
Advertisement
Advertisement
ಟಿಮ್ ಸೌಥಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡುವಾಗ ಧರಿಸಿದ್ದ ಈ ಒಂದು ಬಟ್ಟೆಯಲ್ಲಿ ತಂಡದ ಎಲ್ಲಾ ಸದಸ್ಯರು ಕೂಡ ತಮ್ಮ ಹಸ್ತಾಕ್ಷರ ಹಾಕಿದ್ದಾರೆ. ಆ ಬಟ್ಟೆಯನ್ನೇ ಇದೀಗ ಹರಾಜಿಗಿಟ್ಟಿರುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸೌಥಿ ಪೋಸ್ಟ್ ಹಾಕಿಕೊಂಡಿದ್ದಾರೆ.
Advertisement
View this post on Instagram
ಸೌಥಿ ಪೋಸ್ಟ್ ಹಾಕುತ್ತಿದ್ದಂತೆ ಅವರ ಜೆರ್ಸಿಯನ್ನು ಖರೀದಿಸಲು ಸಾವಿರಾರು ಮಂದಿ ಮುಂದೆ ಬಂದಿದ್ದಾರೆ. ಸೌಥಿಗಿಂತ ಮೊದಲು ಮಾರ್ಟಿನ್ ಗಪ್ಟಿಲ್ ತಮ್ಮ ಬ್ಯಾಟನ್ನು ಹರಾಜಿಗಿಟ್ಟು ಹಾಲ್ಲೀ ಬೀಟಿಯಾ ಚಿಕಿತ್ಸೆಗೆ ನೆರವಾಗಿದ್ದರು. ಇದನ್ನೂ ಓದಿ: ಟೆಸ್ಟ್ ಚಾಂಪಿಯನ್ ಆದ ಬೆನ್ನಲ್ಲೇ ನ್ಯೂಜಿಲೆಂಡ್ ತಂಡದಿಂದ ಹೊಸ ನಿರ್ಧಾರ..?
ಟಿಮ್ ಸೌಥಿ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಲು ಸಾಕಷ್ಟು ಸಹಕಾರಿಯಾಗಿದ್ದಾರೆ. ಫೈನಲ್‍ನಲ್ಲಿ ಭಾರತದ ವಿರುದ್ಧ 112ರನ್ ನೀಡಿ ಐದು ವಿಕೆಟ್ ಕಬಳಿಸಿದ್ದರು. ಅಷ್ಟೆ ಅಲ್ಲದೆ ಬ್ಯಾಟಿಂಗ್‍ನಲ್ಲಿ ಕೂಡ ನ್ಯೂಜಿಲೆಂಡ್ ತಂಡಕ್ಕೆ ನೆರವಾಗಿದ್ದರು. ಇದೀಗ ಕ್ಯಾನ್ಸರ್ ಪೀಡಿತ ಬಾಲಕಿಗೆ ನೆರವಾಗುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.