ವಿಜಯಪುರ: ಬಾರ್ ನ ಬೀಗ ಮುರಿದು ಒಳ ನುಗ್ಗಿ 50 ಸಾವಿರ ಮೌಲ್ಯದ ಮದ್ಯವನ್ನು ಕಳವು ಮಾಡಿರುವ ಘಟನೆ ಜಿಲ್ಲೆಯ ಇಂಡಿ ನಗರದ ಹುಡ್ಕೊದಲ್ಲಿ ನಡೆದಿದೆ.
ಜಿಲ್ಲೆಯ ಬಾರ್ ಬೀಗ ಮುರಿದು ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಮದ್ಯದ ಅಂಗಡಿ ಬೀಗ ಒಡೆದು ನಂತರ ಸಿಸಿ ಕ್ಯಾಮೆರಾ ನಾಶಪಡಿಸಿ ಒಳಭಾಗದಲ್ಲಿದ್ದ ಹಲವು ಬ್ರ್ಯಾಂಡ್‍ನ ಮದ್ಯದ ಬಾಟಲ್‍ಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಮೂಲಕ ಇದೇ ಬಾರ್ ನಲ್ಲಿ ಸತತ ನಾಲ್ಕನೇ ಬಾರಿ ಕಳ್ಳತನ ನಡೆದಂತಾಗಿದೆ. ಈ ಹಿಂದೆ ಮೂರು ಬಾರಿ ಕಳ್ಳರು ಬೀಗ ಮುರಿದು ಕಳ್ಳತನ ಮಾಡಿದ್ದರು.
ಈ ಬಾರಿ ಖದೀಮರು ಸುಮಾರು 50 ಸಾವಿರ ಮೌಲ್ಯದ ಮದ್ಯದ ಬಾಟಲ್ ಹಾಗೂ ಹಣ ಕಳ್ಳತನಗೈದು ಪರಾರಿಯಾಗಿದ್ದಾರೆ. ಬಾರ್ ನ ಬೀಗ ಒಡೆದು ನಂತರ ಸಿಸಿ ಕ್ಯಾಮೆರಾ ನಾಶಪಡಿಸಿ ಕೃತ್ಯ ಎಸಗಿರುವ ಕಳ್ಳರ ವಿರುದ್ಧ ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.