ಮೈಸೂರು: ಮುನಿಸಿಕೊಂಡು ಪತ್ನಿ ತವರಿಗೆ ಹೋಗಿದ್ದ ಪತಿ ಮೊಬೈಲ್ ಟವರ್ ಏರಿ ಕುಳಿತ ಘಟನೆ ಮೈಸೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ.
ಗೌರಿಶಂಕರ್ ಬಿಎಸ್‍ಎನ್‍ಎಲ್ ಟವರ್ ಏರಿ ಕುಳಿತ ಪತಿರಾಯ. ಇತ್ತೀಚೆಗೆ ಗೌರಿಶಂಕರ್ ಮತ್ತು ಪತ್ನಿ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು. ಇದೇ ಕೋಪದಲ್ಲಿ ಗೌರಿಶಂಕರ್ ಪತ್ನಿ ತವರು ಸೇರಿಕೊಂಡಿದ್ದರು. ಪತ್ನಿಯ ನಿರ್ಧಾರದಿಂದ ನೊಂದ ಗೌರಿಶಂಕರ್ ಆತ್ಮಹತ್ಯೆ ಮೊಬೈಲ್ ಟವರ ಏರಿದ್ದಾನೆ. ಗೌರಿಶಂಕರ್ ಆತ್ಮಹತ್ಯೆಗೆ ಮೊಬೈಲ್ ಏರಿದನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು, ಸಾರ್ವಜನಿಕರು ಸೇರುತ್ತಿದ್ದಂತೆ ಪತ್ನಿಯನ್ನ ಕರೆಸಿದರೆ ಮಾತ್ರ ಕೆಳಗೆ ಬರುತ್ತೇನೆ. ಇಲ್ಲವಾದ್ರೆ ಇಲ್ಲಿಂದ ಬಿದ್ದು ಸಾಯುತ್ತೇನೆ ಎಂದು ಗೌರಿಶಂಕರ್ ಹೇಳಿದ್ದಾನೆ. ಬಾರಯ್ಯ, ಬಾರೋ ಕೆಳಗೆ, ನಿನ್ನ ಪತ್ನಿ ಊರಿಂದ ಬರುತ್ತಾಳೆ ಎಂದು ಮನವೊಲಿಸಲು ಮುಂದಾಗಿದ್ದರು. ಸತತ ಒಂದೂವರೆ ಗಂಟೆಗಳ ಹೈಡ್ರಾಮಾದ ಬಳಿಕ ಗೌರಿಶಂಕರ್ ಕೆಳಗೆ ಇಳಿದು ಬಂದಿದ್ದಾನೆ. ಈ ಸಂಬಂಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.