ಬಾಯಿಗೆ ಹಗ್ಗ ಕಟ್ಟಿ ಹೆಣ್ಣು ಶ್ವಾನದ ಮೇಲೆ ಅತ್ಯಾಚಾರವೆಸಗಿದ ನೀಚ ಕಾರ್ಮಿಕ!

Public TV
1 Min Read
DOG

ಮುಂಬೈ: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೇಲೆ ಅತ್ಯಾಚಾರ ನಡೆಯುತ್ತಿರುವ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದರಂತೆ ಇದೀಗ ಹೆಣ್ಣು ಶ್ವಾನದ ಮೇಲೆ ನೀಚ ಕಾಮುಕನೊಬ್ಬ ಅತ್ಯಾಚಾರವೆಸಗುವ ಮೂಲಕ ತನ್ನ ಕಾಮ ತೃಷೆ ತೀರಿಸಿಕೊಂಡ ಘಟನೆಯೊಂದು ನಡೆದಿದೆ.

ಕಳೆದ ವಾರ 8 ವರ್ಷದ ಶ್ವಾನ ನೂರಿ ಮೇಲೆ ಮುಂಬೈನ ಪೊವಾರಿ ಪ್ರದೇಶದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ. 30 ವರ್ಷದ ಕಾರ್ಮಿಕನೊಬ್ಬ ಗುರುವಾರ ಕಾರು ಪಾರ್ಕಿಂಗ್ ಬಳಿ ಹೆಣ್ಣು ಶ್ವಾನದ ಮೇಲೆ ಅತ್ಯಾಚಾರ ಮಾಡಿದ್ದಾನೆ.

Police Jeep 1 2 medium

ಆರೋಪಿಯನ್ನು ಶೋಭ್ನಾಥ್ ಸರೋಜ್ ಎಂದು ಗುರುತಿಸಲಾಗಿದೆ. ಈತ ಮೂಕ ಪ್ರಾಣಿಯ ಬಾಯಿಯನ್ನು ಹಗ್ಗದಿಂದ ಕಟ್ಟಿ ಅದನ್ನು ಕಾರು ಪಾರ್ಕಿಂಗ್ ಬಳಿ ಕೊಂಡೊಯ್ದು ನಂತರ ಶ್ವಾನದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಸ್ಥಳೀಯರು ಹಾಗೂ ಕೆಲವು ಸೆಕ್ಯುರಿಟಿ ಗಾರ್ಡ್ ಗಳು ಶ್ವಾನ ನರಳುತ್ತಿರುವುದನ್ನು ಕೇಳಿಸಿಕೊಂಡು, ಶ್ವಾನ ಇದ್ದಲ್ಲಿಗೆ ತೆರಳಿದ್ದಾರೆ. ಈ ವೇಳೆ ಅದರ ಖಾಸಗಿ ಅಂಗದಲ್ಲಿ ರಕ್ತಸ್ರಾವವಾಗುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ನೆಲದ ಮೇಲೆ ರಕ್ತದ ಕಲೆಗಳು ಇರುವುದನ್ನು ಕೂಡ ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಅವರು ಅಲ್ಲಿ ಏನು ನಡೆದಿದೆ ಎಂಬುದನ್ನು ಅರಿತುಕೊಂಡರು.

DOG

ಈ ಸಂಬಂಧ ಎನ್‍ಜಿಒ ಸದಸ್ಯ ಮಾಧ್ಯಮದೊಂದಿಗೆ ಮಾತನಾಡಿ, ಗುರುವಾರ ಮಧ್ಯಾಹ್ನ ನನಗೊಂದು ಕರೆ ಬಂತು. ಕರೆ ಮಾಡಿದಾತ ಕಾರು ಪಾರ್ಕಿಂಗ್ ಬಳಿ ಕಾರ್ಮಿಕನೊಬ್ಬ ಬಿಳಿ ಬಣ್ಣದ ಶ್ವಾನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ. ಈ ವೇಳೆ ಕೂಡಲೇ 100ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಆತನಿಗೆ ಹೇಳಿದೆ. ಅಲ್ಲದೆ ನಾನು ಕೂಡ ಸ್ಥಳಕ್ಕೆ ದೌಡಾಯಿಸಿದೆ ಎಂದು ತಿಳಿಸಿದರು.

ಕೂಡಲೇ ಮಾಹಿತಿ ನೀಡಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿದರು. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 377 (ಪ್ರಾಣಿಗಳ ಮೇಲೆ ಕ್ರೌರ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತ ಶ್ವಾನವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

Police Jeep

Share This Article
Leave a Comment

Leave a Reply

Your email address will not be published. Required fields are marked *