– ವೈದ್ಯರಿಂದ ತುಂಡಾಗಿದ್ದ ಮರ್ಮಾಂಗ ಮರು ಜೋಡಣೆ
ತಿರುವನಂತಪುರ: ಕೇರಳದ ಬಾರ್ ನಲ್ಲಿ ವಿಚಿತ್ರ ಘಟನೆ ನಡೆದಿದ್ದು, ಗಲಾಟೆ ವೇಳೆ ಯುವಕನೋರ್ವ ವ್ಯಕ್ತಿಯ ಮರ್ಮಾಂಗವನ್ನ ಹಲ್ಲಿನಿಂದ ಕಚ್ಚಿ ಕತ್ತರಿಸಲಾಗಿದೆ. ಕೇರಳದ ಕುನ್ನಾಥುರನಲ್ಲಿ ಈ ಘಟನೆ ನಡೆದಿದೆ.
ಕೋಪದಲ್ಲಿ 28 ವರ್ಷದ ಶರೀಫ್, 55 ವರ್ಷದ ಸುಲೇಮಾನ್ ಎಂಬಾತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾನೆ. ಸದ್ಯ ಗಾಯಾಳು ಸುಲೇಮಾನ್ ನನ್ನು ತ್ರಿಶೂರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುರ್ತ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ತುಂಡಾದ ಮರ್ಮಾಂಗವನ್ನ ಮರು ಜೋಡಣೆ ಮಾಡಿದ್ದಾರೆ.
ಶರೀಫ್ ಪೆರುಂಬಾದಪ್ಪು ನಿವಾಸಿಯಾಗಿದ್ದು, ಸುಲೇಮಾನ್ ರಿಹಾಇಶ್ ಪುನ್ನುಕಾವುನಲ್ಲಿ ವಾಸವಾಗಿದ್ದರು. ಬಾರ್ ಆಗಮಿಸುವ ವೇಳೆ ಶರೀಫ್ ಆಟೋ ರಸ್ತೆಯಲ್ಲಿ ಕಾರ್ ಗೆ ಡಿಕ್ಕಿ ಹೊಡೆದಿತ್ತು. ಈ ಸಂಬಂಧ ಪಾರ್ಕ್ ನಲ್ಲಿ ಗಲಾಟೆ ನಡೆದಿತ್ತು. ಬಾರ್ ನಲ್ಲಿ ಮತ್ತೆ ಇಬ್ಬರು ಮುಖಾಮುಖಿಯಾದಾಗ ಜಗಳ ನಡೆದಿತ್ತು.
ಜಗಳ ವಿಕೋಪಕ್ಕೆ ತಿರುಗಿದಾಗ ನಶೆಯಲ್ಲಿದ್ದ ಶರೀಫ್ ಕೋಪದಲ್ಲಿ ಸುಲೇಮಾನ್ ಹಲ್ಲೆ ನಡೆಸಿದ್ದಾನೆ. ನಂತರ ಮರ್ಮಾಂಗವನ್ನ ಹಲ್ಲಿನಿಂದ ಕಚ್ಚಿ ಕತ್ತರಿಸಿದ್ದಾನೆ. ಈ ಗಲಾಟೆಯಲ್ಲಿ ಬಾರ್ ಸಿಬ್ಬಂದಿಯ ಮೇಲೆಯೂ ಶರೀಫ್ ಹಲ್ಲೆ ನಡೆಸಿದ್ದಾನೆ. ಕೊನೆಗೆ ಬಾರ್ ಸಿಬ್ಬಂದಿ ಗ್ರಾಹಕರ ನೆರವಿಬನಿಂದ ಶರೀಫ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ, ಸುಲೇಮಾನ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಹಿಂದೆಯೂ ಶರೀಫ್ ಮೇಲೆ ಈ ರೀತಿಯ ಗಲಾಟೆ ಪ್ರಕರಣಗಳು ದಾಖಲಾಗಿದ್ದರ ಬಗ್ಗೆ ವರದಿಯಾಗಿದೆ. ನಶೆಯಲ್ಲಿ ಗಲಾಟೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶರೀಫ್ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಇದೀಗ ಮತ್ತೆ ಜೈಲು ಸೇರಿದ್ದಾನೆ.