ಬಾಬಾ ಕಾ ಡಾಬಾ ಬಳಿಕ ಮತ್ತೊಂದು ವೀಡಿಯೋ ವೈರಲ್- 90ರ ವೃದ್ಧನ ಸಹಾಯಕ್ಕಾಗಿ ಮನವಿ

Public TV
2 Min Read
KAANJI BADA

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಒಂದೇ ಒಂದು ವೀಡಿಯೋದಿಂದ ವೃದ್ಧ ದಂಪತಿಯ ಬದುಕು ಬದಲಾದ ಬೆನ್ನಲ್ಲೇ ಇದೀಗ ಮತ್ತೊಂದು ವೃದ್ಧನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

KAANJI 2

ಹೌದು. ಆಗ್ರಾದ 90 ವರ್ಷದ ವೃದ್ಧ ಬದುಕಿನ ಬಂಡಿ ಸಾಗಿಸಲು ರಸ್ತೆ ಬಂದಿ ಒಂದು ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಆದರೆ ಕೊರೊನಾ ವೈರಸ್ ಎಂಬ ಮಹಾಮಾರಿ ಬಂದ ಬಳಿಕ ವೃದ್ಧ ತನ್ನ ಆದಾಯ ಕಳೆದುಕೊಂಡು ಕಣ್ಣೀರಾಕಿದ್ದಾರೆ.

KAANJI BADA 1

ವೃದ್ಧನ ಸ್ಟಾಲ್ ವೀಡಿಯೋವನ್ನು ಇನ್ ಸ್ಟಾಗ್ರಾಂ ಬಳಕೆದಾರ ಧನಿಷ್ಟ ಎಂಬವರು ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಆಗ್ರಾ ಮೂಲದ 90 ವರ್ಷದ ವೃದ್ಧ ಕಳೆದ 40 ವರ್ಷಗಳಿಂದ ಕಾಂಜಿ ಬಡಾ(ಹೆಸರುಬೇಳೆ ವಡೆ)ವನ್ನು ಮಾರಾಟ ಮಾಡುತ್ತಿದ್ದರು. ಆದರೆ ಚೀನಿ ವೈರಸ್ ಕೋವಿಡ್ 19 ದೇಶಕ್ಕೆ ಕಾಲಿಟ್ಟ ಬಳಿಕ ವೃದ್ಧ ದಿನಕ್ಕೆ ಕೇವಲ 250-300 ರೂ. ಮಾತ್ರ ಸಂಪಾದನೆ ಮಾಡುತ್ತಿದ್ದಾರೆ. ಇದರಿಂದ ಬದುಕಿನ ಬಂಡಿ ಸಾಗಿಸಲು ವೃದ್ಧ ಪರದಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/CGFfkQ5llGZ/?utm_source=ig_embed

ವೃದ್ಧ ನಡೆಸುತ್ತಿರುವ ಸ್ಟಾಲ್ ವೀಡಿಯೋ ಹಂಚಿಕೊಂಡಿರುವ ಧನಿಷ್ಟ, ನಿಖರವಾದ ಸ್ಥಳ ಹಾಗೂ ವೃದ್ಧನ ಈ ಸ್ಟಾಲ್ ಗೆ ಭೇಟಿ ನೀಡುವ ಮೂಲಕ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಚಿಕ್ಕಪ್ಪ ಕಳೆದ 40 ವರ್ಷಗಳಿಂದ ಕಾಂಜಿ ಬಡಾವನ್ನು ಮಾರಾಟ ಮಾಡುತ್ತಿದ್ದಾರೆ. ಈಗ ಅವರಿಗೆ 90 ವರ್ಷ ವಯಸ್ಸು. ಸಾಂಕ್ರಾಮಿಕ ರೋಗದಿಂದಾಗಿ ಅವರು ದಿನಕ್ಕೆ ಕೇವಲ 250-300 ರೂ. ಅಷ್ಟೇ ಸಂಪಾದಿಸುತ್ತಿದ್ದಾರೆ. ಇದರಿಂದ ಅವರಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ನೀವೇಲ್ಲರೂ ಅವರ ಸ್ಟಾಲ್ ಗೆ ಬಂದು, ಅವರ ಕೈ ರುಚಿ ಸವಿದು ಸಹಾಯ ಮಾಡುವಂತೆ ಧನಿಷ್ಟ ಕೇಳಿಕೊಂಡಿದ್ದಾರೆ.

old man 1

ಅಲ್ಲದೆ ವೃದ್ಧನ ಸ್ಟಾಲ್ ಇರುವ ಜಾಗದ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದಾರೆ. ಪ್ರೊಫೆಸರ್ ಕಾಲೋನಿ, ಕಮಲಾ ನಗರ್, ಆಗ್ರಾ, ಡಿಸೈರ್ ಬೇಕರಿ ಬಳಿ ಇರುವುದಾಗಿ ತಿಳಿಸಿದ್ದಾರೆ. ಸದ್ಯ ನಾನು ಇಲ್ಲಿದ್ದು, ನೀವು ಕೂಡ ಇಲ್ಲಿ ಬಂದು, ಆಹಾರ ಸವಿಯಿರಿ. ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡುವಿರಿ ಎಂದು ನಾನು ಭಾವಿಸುತ್ತೇನೆ. ಪ್ರತಿ ದಿನ ಸಂಜೆ 5.30ಕ್ಕೆ ಅವರು ಸ್ಟಾಲ್ ತೆರೆಯುತ್ತಾರೆ ಎಂದು ಧನಿಷ್ಟ ಮಾಹಿತಿ ನೀಡಿದ್ದಾರೆ.

Untitled 1 1

ಧನಿಷ್ಟ ಇಷ್ಟು ಹೇಳುತ್ತಿದ್ದಂತೆಯೇ ಸಾವಿರಾರು ಮಂದಿ ಕಮೆಂಟ್ ಮಾಡಿ, ವೃದ್ಧನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!

Share This Article