ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆಯುತ್ತದೆ. ಅದ್ಭುತ ಆರೋಗ್ಯಕರ ಅಂಶವನ್ನು ಬಾದಾಮಿ ಹೊಂದಿದೆ. ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಅತ್ಯುತ್ತಮ. ನೆನೆಸಿಟ್ಟ ಬಾದಾಮಿ ಸೇವನೆ ಭಾರತೀಯರಿಗೆ ಹೊಸದೇನೂ ಅಲ್ಲ. ನೆನಸಿಟ್ಟು ಬಾದಾಮಿಯಿಂದ ಸಿಗಲಿದೆ ಹಲವು ಪ್ರಯೋಜನ.
Advertisement
* ರಾತ್ರಿ ವೇಳೆ ಬಾದಾಮಿಯನ್ನು ನೆನೆಸಿಟ್ಟು ಬೆಳಿಗ್ಗೆ ವೇಳೆ ಉಪಹಾರಕ್ಕೂ ಮೊದಲು ಸೇವಿಸಿ ಇದರಿಂದ ಜ್ನಾಪಕ ಶಕ್ತಿ ಹೆಚ್ಚಾಗುತ್ತದೆ.
Advertisement
* ನೆನೆಸಿಟ್ಟಿರುವ ಬಾದಾಮಿ ಸೇವನೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
Advertisement
Advertisement
* ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ದ ಪ್ರಮಾಣದಲ್ಲಿದೆ. ಈ ವಿಟಮಿನ್ ಇ ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುತ್ತದೆ.
* ಬಾದಾಮಿಯಲ್ಲಿರುವ ಪೋಷಕಾಂಶಗಳು ಈ ಸಮತೋಲನವನ್ನು ಸಾಧಿಸಲು ಹೆಚ್ಚಿನ ನೆರವು ನೀಡುತ್ತವೆ. ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ನೆರವಾಗುತ್ತವೆ.
* ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ನೆನೆಸಿಟ್ಟ ಬಾದಾಮಿಯುನ್ನು ತಿನ್ನುವುದರಿಂದ ಉನ್ನತ ಮಟ್ಟದ ಪೋಟಾಶಿಯಂ ಮತ್ತು ಕಡಿಮೆ ಸೋಡಿಯಂ ಇದ್ದು, ಇದು ರಕ್ತದೊತ್ತಡ ಹೆಚ್ಚದಂತೆ ತಡೆಯುತ್ತದೆ.
* ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ಮಿಟಮಿನ್ ಇ ಮತ್ತು ಮೆಗ್ನೀಸಿಯಮ್ ಅಂಶಗಳಿರುತ್ತದೆ. ಪ್ರತಿದಿನ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.