ಬಹು ಮಹಡಿ ಕಟ್ಟಡ ಕುಸಿತ- 15 ಜನರ ರಕ್ಷಣೆ, ಅವಶೇಷದಡಿ ಸಿಲುಕಿದ 70 ಮಂದಿ

Public TV
1 Min Read
Raigarh

-ಎನ್‍ಡಿಆರ್‍ಎಫ್ ತಂಡದಿಂದ ಕಾರ್ಯಾಚರಣೆ

ಮುಂಬೈ/ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್ ನಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿತವಾಗಿದೆ. ಸದ್ಯ 15 ಜನರನ್ನು ರಕ್ಷಿಸಲಾಗಿದ್ದು, ಸುಮಾರು 70 ಮಂದಿ ಅವಶೇಷಗಳಡಿ ಸಿಲುಕಿರುವ ಬಗ್ಗೆ ವರದಿಯಾಗಿದೆ.

ಘಟನಾ ಸ್ಥಳಕ್ಕೆ ಮೂರು ಎನ್‍ಡಿಆರ್‍ಎಫ್ ತಂಡಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂದು ಸಂಜೆ ಸುಮಾರು 6.30ಕ್ಕೆ ಮಹಾಡ್ ನಲ್ಲಿಯ ತಹಸೀಲ್ ನ ಕಾಜಲಪುರ ಇಲಾಖೆಯಲ್ಲಿಯ 5 ಮಹಡಿ ಕಟ್ಟಡವೊಂದು ಬಿದ್ದಿದೆ.ಸದ್ಯ ಅವಶೇಷಗಳಡಿ 50 ಜನರು ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎಲ್ಲ ಉಪಕರಣಗಳ ಜೊತೆ ಎನ್‍ಡಿಆರ್‍ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ತಿಂಗಳು ಮುಂಬೈನಲ್ಲಿ ನಿರಂತರ ಮಳೆಯಿಂದ ಬಹುಮಹಡಿ ಕಟ್ಟಡ ಬಿದ್ದಿತ್ತು. ಈ ಘಟನೆಯಲ್ಲಿ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದರು. ಶನಿವಾರ ರಾತ್ರಿ ಗುರುಗ್ರಾಮದಲ್ಲಿ ನಿರ್ಮಾಣ ಹಂತದ ಫ್ಲೈಓವರ್ ಕುಸಿದು ಇಬ್ಬರು ಗಾಯಗೊಂಡಿದ್ದರು.

Share This Article