ಬಸ್ ಸ್ಟ್ಯಾಂಡ್ ರೋಮಿಯೋಗಳನ್ನು ಕಾಲೇಜಿಗೆ ಕಳುಹಿಸಿಲು ಟಿಸಿ ಮಾಸ್ಟರ್ ಪ್ಲಾನ್

Public TV
1 Min Read
hsn college boys

ಹಾಸನ: ಕಾಲೇಜಿಗೆ ತೆರಳದೆ ಬಸ್ ನಿಲ್ದಾಣದಲ್ಲೇ ಕುಳಿತು ಮೊಬೈಲ್‍ನಲ್ಲಿ ಗೇಮ್ ಆಡುವುದು, ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತ ಕಾಲ ಕಳೆಯುತ್ತಿದ್ದ ಹುಡುಗರಿಗೆ ಟಿಸಿ ಬುದ್ಧಿ ಹೇಳಿ ಕಾಲೇಜಿಗೆ ಕಳುಹಿಸುತ್ತಿದ್ದಾರೆ.

vlcsnap 2021 02 20 12h27m37s355

ಹಾಸನದ ಅರಸೀಕೆರೆಯಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದಾಗಿ ಊರಿನಿಂದ ಬಂದು ಬಸ್ ನಿಲ್ದಾಣದಲ್ಲಿ ಕಾಲ ಕಳೆಯುತ್ತಿದ್ದರು. ಇವರಲ್ಲಿ ಕೆಲವರು ಬಸ್ ಸ್ಟ್ಯಾಂಡ್ ರೋಮಿಯೋಗಳ ರೀತಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರು. ಈ ಬಗ್ಗೆ ವಿದ್ಯಾರ್ಥಿನಿಯರು ಟಿಸಿ ಬಳಿ ಅಳಲು ತೋಡಿಕೊಂಡಿದ್ದರು.

vlcsnap 2021 02 20 12h28m17s082

ಕಾಲೇಜಿಗೆ ಹೋಗಿ ಎಂದು ಟಿಸಿ ಬಾಯಿ ಮಾತಲ್ಲಿ ಹುಡುಗರಿಗೆ ಹೇಳಿದರೆ ಕ್ಯಾರೆ ಅನ್ನುತ್ತಿರಲಿಲ್ಲ. ಇದರಿಂದ ಹೊಸ ಉಪಾಯ ಮಾಡಿದ ಟಿಸಿ, ಮೊಬೈಲ್ ಕ್ಯಮೆರಾ ಆನ್ ಮಾಡಿ, ಯಾಕೆ ಇಲ್ಲಿ ಕುಳಿತಿದ್ದೀರಾ. ನಿಮಗೆ ಕಾಲೇಜ್ ಇಲ್ಲವೇ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಯಾವಾಗ ತಮ್ಮನ್ನು ವಿಡಿಯೋ ಮಾಡುತ್ತಿದ್ದಾರೆ ಎಂದು ತಿಳಿಯಿತೋ ಆಗ ಸಹಜವಾಗೇ ಹುಡುಗರು ಬಸ್ ಸ್ಟ್ಯಾಂಡ್‍ನಿಂದ ಕಾಲ್ಕಿತ್ತಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *