– ಖಾಸಗಿ ಮಾಹನಗಳಿಗೆ ದುಪ್ಪಟ್ಟು ದರ
– ಬಸ್ ಇಲ್ಲ, ರೈಲೂ ಇಲ್ಲ
ಗದಗ: ಇಂದು 2ನೇ ದಿನವೂ ಸಾರಿಗೆ ಬಸ್ ಬಂದ್ ನಿಂದ ಸಾರ್ವಜನಿಕರು ಸಾಕಷ್ಟು ಪರದಾಡಿದರು. ಅನಿವಾರ್ಯತೆ ಇರುವ ಪ್ರಯಾಣಿಕರು ರೈಲು ಪ್ರಯಾಣದತ್ತ ಮುಖ ಮಾಡಿದ್ದಾರೆ. ಬಸ್ ಇಲ್ಲದೇ ಸರಿಯಾಗಿ ರೈಲು ಇಲ್ಲದೆ ಅಸ್ತವ್ಯಸ್ತತೆಯಿಂದ ಮಹಿಳಾ ಪ್ರಯಾಣಿಕರೊಬ್ಬರು ಪಬ್ಲಿಕ್ ಟಿವಿ ಎದುರು ಕಣ್ಣೀರಿಟ್ಟು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
Advertisement
ಕೊಪ್ಪಳ ಮೂಲದ ದೀಪಾ ಕುಲಕರ್ಣಿ ಎಂಬ ಮಹಿಳೆ ಮಗಳೊಂದಿಗೆ ಗದಗಿನಲ್ಲಿ ಅನಾರೋಗ್ಯಕ್ಕೊಳಗಾದ ಸಂಬಂಧಿಕರೊಬ್ಬರನ್ನು ಮಾತನಾಡಿಸಲು ಬಂದಿದ್ದರು. ನಿನ್ನೆ ಏಕಾಏಕಿ ಬಸ್ ಬಂದ್ ನಿಂದ ಮರಳಿ ಊರಿಗೆ ಹೋಗಲಾಗದೆ ಸಾಕಷ್ಟು ಪರದಾಡಿದ್ದಾರೆ.
Advertisement
Advertisement
ಇಂದು ರೈಲ್ವೆ ನಿಲ್ದಾಣದಲ್ಲೂ ಸರಿಯಾಗಿ ರೈಲು ಇಲ್ಲದಕ್ಕೆ ಕಣ್ಣೀರಿಟ್ಟ ಮಹಿಳೆ ತಮಗಾದ ತೊಂದರೆ ಬಗ್ಗೆ ಪಬ್ಲಿಕ್ ಟಿವಿ ಎದುರು ಕಣ್ಣೀರಿಟ್ಟು ಅಳಲು ತೋಡಿಕೊಂಡಿದ್ದಾರೆ. ದಿಢೀರ್ ಬಂದ್ ಮಾಡಿರುವುದು ಸಾಕಷ್ಟು ತೊಂದರೆಯಾಗಿದೆ. ಮಗಳನ್ನು ಕಟ್ಟಿಕೊಂಡು ಬಸ್ ಹಾಗೂ ರೈಲು ನಿಲ್ದಾಣದಲ್ಲಿ ಹೇಗೆ ಇರಬೇಕು. ಅರ್ಧ ದಾರಿನಲ್ಲಿ ಹೀಗಾದ ವೇಳೆ ಯಾರಾದರೂ ಸಂಬಂಧಿಕರು ಇದ್ದರೆ ಪರವಾಗಿಲ್ಲ ಇಲ್ಲವಾದರೆ ನಮ್ಮ ಪರಸ್ಥಿತಿ ಕೇಳುವವರು ಯಾರು. ಸರ್ಕಾರ ಜನಸಾಮಾನ್ಯರಿಗಾಗುವ ತೊಂದರೆ ತಪ್ಪಿಸಬೇಕು ಅಂತ ಆಗ್ರಹಿಸಿದರು.
Advertisement
ಖಾಸಗಿ ವಾಹನಗಳ ದುಪ್ಪಟ್ಟು ದರದಿಂದ ಬೇಸತ್ತ ಜನರು ರೈಲು ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ದೂರದ ಪ್ರದೇಶಗಳಿಗೆ ತೆರಳುವ ಸಾರ್ವಜನಿಕರು ಟಿಕೆಟ್ ಕೌಂಟರ್ ನಲ್ಲಿ ಸರದಿಯ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಪ್ರಯಾಣ ಮಾಡುತ್ತಿದ್ದಾರೆ.