ಕೋಲ್ಕತ್ತಾ: ಕಾರು, ಬಸ್, ಬೈಕ್ ಓಡಿಸುವ ಮಹಿಳೆಯರ ಕುರಿತು ಕೇಳಿದ್ದೇವೆ ಮತ್ತು ನೋಡಿದ್ದೇವೆ ಆದರೆ ಎಂಟು ವರ್ಷದವಳಿದ್ದಾಗಲೇ ಬಸ್, ಟ್ರಕ್‍ಗಳನ್ನು ಓಡಿಸಲು ಕಲಿತಿರುವ ದೇಶದ ಕಿರು ಮಹಿಳಾ ಬಸ್ ಡ್ರೈವರ್ ಕತೆ ಕೇಳಿದರೆ ಹೆಮ್ಮೆ ಜೊತೆ ಆಶ್ಚರ್ಯವಾಗುವುದು ಖಂಡಿತಾ ಹೌದು.
ಕಲ್ಪನಾ ಮೊಂಡಾಲ್(21) ಎಂಬ ಯುವತಿ ಬಸ್, ಟ್ರಕ್‍ಗಳಂತ ಭಾರೀ ಗಾತ್ರದ ವಾಹನಗಳನ್ನು ಚಾಲನೆ ಮಾಡುವ ಮೂಲಕವಾಗಿ ಎಲ್ಲರೂ ಹುಬ್ಬೆರುವಂತೆ ಮಾಡುತ್ತಿದ್ದಾರೆ. ಈಕೆಗೆ ಇವರ ತಂದೆಯೇ ಸ್ಫೂರ್ತಿಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಯುವತಿ ವಾಹನ ಚಾಲನೆ ಮಾಡುತ್ತಾಳೆ.
ಕಲ್ಪನಾ ಕುಟುಂಬ ಅವರ ತಂದೆಯ ಸಂಪಾದನೆಯನ್ನು ನಂಬಿ ಜೀವನ ನಡೆಸುತ್ತಿತ್ತು. ಆದರೆ 2 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಇವರ ತಂದೆ ಕಾಲುಗಳನ್ನು ಕಳೆದುಕೊಂಡರು. ನಂತರ ಈಕೆ ತಂದೆ ಹೊರುತ್ತಿದ್ದ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲಿಗೆ ತೆಗೆದುಕೊಂಡಳು. ಕಲ್ಪನಾ ವಾಹನ ಚಾಲನೆಯನ್ನು ಕಲಿಯುವಾಗ ಇನ್ನು 8 ವರ್ಷದವಳಾಗಿದ್ದಳು. ಮನೆ ಮತ್ತು ಹತ್ತಿರದ ಪ್ರದೇಶಗಳಲ್ಲಿ ವಾಹನ ಚಾಲನೆಯ ಅಭ್ಯಾಸ ಮಾಡತೊಡಗಿದಳು. ಬಳಿಕ ಬಸ್ ಚಾಲನೆಯ ಪರೀಕ್ಷೆಯಲ್ಲಿ ಉತ್ತೀರ್ಣಳಾದಳು. ಮೇನ್ ರೋಡ್‍ಗಳಲ್ಲಿ ವಾಹನ ಚಾಲನೆ ಮಾಡಲು ಪರವಾನಿಗೆ ಪಡೆದುಕೊಂಡಳು. ಇದೀಗ ಬಸ್ ಚಾಲನೇ ಮಾಡುತ್ತಾ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ.
ಆದರೆ ಕಲ್ಪನಾ ಬಸ್ ಚಲಾಯಿಸಲು ಸಾಧ್ಯವಿಲ್ಲೆಂದು ಯಾರು ಕೆಲಸ ಕೊಡಲಿಲ್ಲ. ಆದರೆ ಓರ್ವ ಮಾಲೀಕ ಮುಂದೆ ಬಂದು ಕಲ್ಪನಾಗೆ ಸಹಾಯ ಮಾಡಿದನು. ಕಲ್ಪನ ಕೆಲಸ ಕೊಡದೆ ಹಿಂದೆ ಕಳಿಸಿದವರ ಮುಂದನೆ ವಾಹನ ಚಾಲನೆ ಮಾಡುತ್ತಿರುವುದು ಅವಳಿಗೆ ಹೆಮ್ಮೆ ಯಾಗುತ್ತಿದೆ. ಮಗಳ ದಿಟ್ಟ ನಿರ್ದಾರ ಮತ್ತು ಚಿಕ್ಕ ವಯಸ್ಸಿಗೆ ಅವಳು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕುಟುಂಬಸ್ಥರು ಹೆಮ್ಮೆ ಪಡುತ್ತಿದ್ದಾರೆ.
ಕೋಲ್ಕತ್ತಾದಂತಹ ಪ್ರದೇಶದಲ್ಲಿ ವಾಹನ ಚಾಲನೆ ಮಾಡುವುದು ಎಂದರೆ ಸುಲಭದ ಮಾತಲ್ಲ. ಇಕ್ಕಟ್ಟಾದ ಪ್ರದೇಶಗಳಲ್ಲಿಯೂ ಕಲ್ಪನಾ ಲೀಲಾಜಾಲವಾಗಿ ವಾಹನ ಚಲಾಯುಸುತ್ತಾಳೆ. ಕಿಕ್ಕಿರಿದ ಜನಸಂದಣಿ ಇರುವಂತಹ ಮಾರುಕಟ್ಟೆಯಾದರೂ ಕಲ್ಪನಾ ಉತ್ತಮವಾಗಿ ಬಸ್ ಚಾಲನೆ ಮಾಡುತ್ತಾಳೆ. ಅಷ್ಟೊಂದು ತಾನು ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆ ಮತ್ತು ನಿಪುಣತೆಯನ್ನು ಕಲ್ಪನಾ ಹೊಂದಿದ್ದಾಳೆ.
ತಡರಾತ್ರಿಯವರೆಗೆ ಕೆಲಸ ಮಾಡುತ್ತಿರುವುದರಿಂದ ಓದಲು ಸಾಧ್ಯವಾಗುತ್ತಿಲ್ಲ. ನನ್ನ ಹೆತ್ತವರು ಮಾತ್ರವಲ್ಲದೆ ಮೂವರು ಸಹೋದದರು ಇದ್ದಾರೆ. ನಾನು ಕಿರಿಯ ಮಗಳಾಗಿದ್ದೇನೆ. 10 ನೇ ತರಗತಿಯ ವರೆಗೆ ಓದನ್ನಾದರೂ ಮುಗಿಸಿ ಪೊಲೀಸ್ ಇಲಾಖೆಗೆ ಡ್ರೈವರ್ ಕೆಲಸಕ್ಕೆ ಅರ್ಜಿ ಸಲ್ಲಿಸುವ ಆಸೆ ಇದೆ ಎಂದು ಸ್ವತಃ ಕಲ್ಪನಾ ಹೇಳಿದ್ದಾರೆ.
ನಾನು ಬಸ್ ಚಲಾಯಿಸುವಾಗ ಪೊಲೀಸರು ನಿನನಗೆ ಈ ಕೆಲಸ ಕಷ್ಟವಾಗುವುದಿಲ್ಲವೇ ಎಂದು ಕೇಳುತ್ತಾರೆ. ಹಾಗೂ ನಮ್ಮ ಮುಂದೆ ವಾಹನಚಲಾಯಿಸಿ ತೋರಿಸು ಅನ್ನಾತ್ರೆ. ನಾನು ವಾಹನ ಚಾಲನೆ ಮಾಡುವಾಗ ಸಂತೋಷಪಟ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿ ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ನಾನು ಮಾಡುವ ಕೆಲಸದಲ್ಲಿ ನನಗೆ ಸಂತೋಷವಿದೆ ಎಂದು ಹೇಳಿದ್ದಾರೆ.