ಗದಗ: ಬಸ್ ನಿಲುಗಡೆಗೆ ಹಾಗೂ ಹೆಚ್ಚು ಬಸ್ಸಿಗಾಗಿ ಆಗ್ರಹಿಸಿ ಕಾಲೇಜ್ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ಮಾಡಿರುವ ಘಟನೆ ಗದಗ ತಾಲೂಕಿನ ಮುಳಗುಂದ ಪಟ್ಟಣಲ್ಲಿ ನಡೆದಿದೆ.
Advertisement
ಎಬಿವಿಪಿ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಒಟ್ಟಾಗಿ ಪ್ರತಿಭಟನೆ ಮಾಡಿದರು. ಮುಳಗುಂದ ಹೊರವಲಯದ ಆರ್.ಎನ್ ದೇಶಪಾಂಡೆ ಸರ್ಕಾರಿ ಕಾಲೇಜ್ ಹೋಗಬೇಕು ಎಂದರೆ ಸುಮಾರು 2 ಕಿಲೋಮೀಟರ್ ನಡೆದುಕೊಂಡೆ ಹೋಗಬೇಕು. ಕಾಲೇಜ್ ಬಳಿಯೇ ಬಸ್ ಹೋದರು ನಿಲ್ಲಿಸುವುದಿಲ್ಲ. ಹೆಚ್ಚುವರಿ ಬಸ್ ಬಿಡುತ್ತಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿಗಳು ಇಂದು ಕಾರವಾರ ಕೈಗಾ ಮತ್ತು ಗದಗ ಮಾರ್ಗವಾಗಿ ಇಳಕಲ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ವಿದ್ಯಾರ್ಥಿಗಳು ರಸ್ತೆಮಧ್ಯೆ ಕುಳಿತು ಸಾರಿಗೆ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ರಸ್ತೆ ಬಂದ್ ನಿಂದ ಕೆಲಕಾಲ ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅನುಕೂಲಕ್ಕಾಗಿ ಪಟ್ಟಣ ಹೊರವಲಯದ ಕಾಲೇಜ್ ಬಳಿ ಬಸ್ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದರು. ನಂತರ ಪೊಲೀಸ್ ಸಿಬ್ಬಂದಿ ಹಾಗೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ.
Advertisement