– ಹರ್ಯಾಣದ ಮೊದಲ ಮಹಿಳಾ ಕಂಡಕ್ಟರ್
ಚಂಡೀಗಢ: ಹರ್ಯಾಣದ ಮೊದಲ ಮಹಿಳಾ ಕಂಡಕ್ಟರ್ ಶೈಫಾಲಿ ಮದುವೆ ದಿನ ಹೆಲಿಕಾಪ್ಟರ್ ನಲ್ಲಿ ಗಂಡನ ಮನೆಗೆ ತೆರಳಿದ್ದಾರೆ.
Advertisement
ಸಿರಸಾ ಜಿಲ್ಲೆಯಲ್ಲಿ ನಡೆದ ಈ ವಿಶೇಷ ಮದುವೆಗೆ ಶೈಫಾಲಿ ಮತ್ತು ಪತಿ ಸಚಿನ್ ಸಹಾರಣ್ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಶೈಫಾಲಿ ಸಿರಾಸಾ ಜಿಲ್ಲೆಯ ಹೆಚ್‍ಎಸ್‍ವಿಪಿ ಸೆಕ್ಟರ್ ನಿವಾಸಿ ಪವನ್ ಮಾಂಡಾ ಅವರ ಪುತ್ರಿಯಾಗಿದ್ದು, ಹರ್ಯಾಣದ ಮೊದಲ ಬಸ್ ನಿರ್ವಾಹಕಿಯಾಗಿದ್ದಾರೆ. ತಂದೆ ಎಸ್‍ಡಿಎಂ ಕಾರ್ಯಲಯದ ಕಾರ್ಯಕರ್ತ ಮತ್ತು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇನ್ನು ಪತಿ ಸಚಿನ್ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಫೀಲ್ಡ್ ಆಫೀಸರ್ ಆಗಿದ್ದಾರೆ.
Advertisement
Advertisement
ಮಾಂಡಾ ಕುಟುಂಬದಲ್ಲಿ ಬಹು ವರ್ಷಗಳ ನಂತರ ಹೆಣ್ಣು ಮಗು ಜನನವಾಗಿತ್ತು. ಹಾಗಾಗಿ ಶೈಫಾಲಿ ಮಾಂಡಾ ಕುಟುಂಬದ ಮುದ್ದಿನ ಮಗಳಾಗಿ ಬೆಳೆದಿದ್ದರು. ಅಪ್ಪ, ಚಿಕ್ಕಪ್ಪ ಸಹ ಸೇರಿದಂತೆ ಎಲ್ಲರ ಅಕ್ಕರೆಯಲ್ಲಿ ಬೆಳೆದ ಶೈಫಾಲಿಯನ್ನ ಗಂಡನ ಮನೆಗೆ ಹೆಲಿಕಾಪ್ಟರ್ ನಲ್ಲಿ ಕಳುಹಿಸಿದ್ದಾರೆ. ಶೈಫಾಲಿ ಊರಿನಿಂದ 25 ಕಿ.ಮೀ. ದೂರದಲ್ಲಿರಿವ ಸಚಿನ್ ಊರನ್ನ 15 ನಿಮಿಷದಲ್ಲಿ ತಲುಪಿದ್ದಾರೆ.