ಬಸ್ಸಿನಲ್ಲಿ ಎಲ್ಲರೂ ಮಲಗಿದ್ದ ಸಮಯದಲ್ಲೇ ಚಾಲಕನಿಂದ ಮಹಿಳೆಯ ಮೇಲೆ ರೇಪ್

Public TV
1 Min Read
rape

ನೊಯ್ಡಾ: ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಅತ್ಯಾಚಾರ ನಡೆದ ಘಟನೆಯೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಗೌತಮ್ ಬುದ್ದ ನಗರದಲ್ಲಿ ಮಹಿಳೆ ಬಸ್ಸಿನಿಂದ ಇಳಿದ ನಂತರ ತನ್ನ ಪತಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಮಹಿಳೆಯ ಪತಿ ಸ್ಥಳೀಯರ ಸಹಕಾರದಿಂದ ಆರೋಪಿ ಬಸ್ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಚಾಲಕನ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

Police Jeep 1

ನಡೆದಿದ್ದೇನು?
ಮಂಗಳವಾರ- ಬುಧವಾರ ಮಧ್ಯರಾತ್ರಿಯ ವೇಳೆ ಲಕ್ನೋ-ಮಥುರಾ ಹೆದ್ದಾರಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಈ ಬಸ್ ಪ್ರತಾಪ್‍ಗರ್ ನಿಂದ ನೊಯ್ಡಾ ಕಡೆ ಚಲಿಸುತ್ತಿತ್ತು. ಬಸ್ಸಿನಲ್ಲಿ 12 ಮಂದಿ ಪ್ರಯಾಣಿಕರಿದ್ದು, ಎಲ್ಲರೂ ಗಾಢ ನಿದ್ದೆಗೆ ಜಾರಿದ್ದರು. ಎಲ್ಲರೂ ನಿದ್ದೆ ಮಾಡುತ್ತಿರುವ ಸಂದರ್ಭವನ್ನೇ ಉಪಯೋಗಿಸಿಕೊಂಡ ಬಸ್ಸಿನ ಸಿಬ್ಬಂದಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಈತನಿಗೆ ಮತ್ತಿಬ್ಬರು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

rape

ಪರಕರಣ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ತಂಡ ರಚಿಸಿದ್ದಾರೆ. ಖಾಸಗಿ ಕಂಪನಿಗೆ ಸೇರಿದ್ದ ಬಸ್ ಇದಾಗಿದ್ದು, ಚಾಲಕನನ್ನು ಬಂಧಿಸಲಾಗಿದೆ. ಬಸ್ಸನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಳಿಕ ಬಸ್ ಮಾಲೀಕ, ಇನ್ನೊಬ್ಬ ಚಾಲಕ ಹಾಗೂ ಕ್ಲೀನರ್ ಸೇರಿ ಮತ್ತಿಬ್ಬರು ಪರಾರಿಯಾಗಿದ್ದಾರೆ.

police 1 e1585506284178

ಸಂತ್ರಸ್ತೆಯಿಂದದೂರು ದಾಖಲಿಸಕೊಂಡ ಕೂಡಲೇ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ. ಗಟನೆಗೆ ಸಂಬಂಧಿಸಿದಂತೆ ಓರ್ವ ಆರೋಪಿ ಹಾಗೂ ಬಸ್ಸನ್ನು ಸೀಜ್ ಮಾಡಲಾಗಿದೆ. ಬಸ್ಸಿನ ಮಾಲೀಕ ಹಾಗೂ ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅಲ್ಲದೆ ಉಳಿದ ಪ್ರಯಾಣಿಕರಿಂದಲೂ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ಶುಕ್ಲಾ ತಿಳಿಸಿದರು.

Share This Article