ಬೆಂಗಳೂರು: ಸಿಎಂ ರೇಸ್‍ನಲ್ಲಿ ಇಂದು ದಿಢೀರ್ ಅಂತಾ ಬಸವರಾಜ ಬೊಮ್ಮಾಯಿ ಹೆಸರು ಸೇರ್ಪಡೆ ಆಯ್ತು. ಅರವಿಂದ್ ಬೆಲ್ಲದ್, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ಮುರುಗೇಶ್ ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವರ ಹೆಸರು ಸಿಎಂ ರೇಸ್‍ನಲ್ಲಿ ಕೇಳಿಬಂದಿತ್ತು. ಅಂತಿಮವಾಗಿ ಬೆಲ್ಲದ್-ಬೊಮ್ಮಾಯಿ ಹೆಸರು ಫೈನಲ್ ರೇಸ್‍ನಲ್ಲಿ ಉಳಿಯಿತು. ಕೊನೆಗೆ ಯುವ ಮುಖ ಅರವಿಂದ್ ಬೆಲ್ಲದ್ ಮೆಟ್ಟಿನಿಂತು ಬಸವರಾಜ ಬೊಮ್ಮಾಯಿ ಸಿಎಂ ಗಾದಿಗೆ ಆಯ್ಕೆಯಾದ್ರು.
ಬಸವರಾಜ ಬೊಮ್ಮಾಯಿ.. ಸಿಎಂ ಆಯ್ಕೆಗೆ ಕಾರಣಗಳು
* ಕಾರಣ 1 – ರಾಜಕೀಯ ಅನುಭವ, ಚಾಣಾಕ್ಷತನ
* ಕಾರಣ 2 – ಸಂಯಮಿ, ಮೃದು ಸ್ವಭಾವ
* ಕಾರಣ 3 – ಬಿಜೆಪಿ ಸೇರಿದ ಮೇಲೆ ತೋರಿದ ಪಕ್ಷ ನಿಷ್ಠೆ
* ಕಾರಣ 4 – ಬಿಎಸ್‍ವೈ ಕೆಜೆಪಿ ಕಟ್ಟಿದಾಗಲೂ ಬಿಜೆಪಿಯಲ್ಲೇ ಉಳಿದಿದ್ದು
* ಕಾರಣ 5 – ಬಿಎಸ್ ಯಡಿಯೂರಪ್ಪ ಪರಮಾಪ್ತ
* ಕಾರಣ 6 – ಲಿಂಗಾಯತ ಮುಖಂಡ (ಸಾದರ)
ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ:
28-01-1960 ಹುಬ್ಬಳ್ಳಿಯಲ್ಲಿ ಜನಿಸಿದ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಎಸ್.ಆರ್.ಬೊಮ್ಮಾಯಿ ಅವರ ಪುತ್ರ. ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬಿ.ಇ ಮೆಕ್ಯಾನಿಕಲ್ ಪದವೀಧರರಾಗಿರುವ ಬೊಮ್ಮಾಯಿ ಅವರು ಯುವ ಜನತಾದಳದಿಂದ ರಾಜಕೀಯ ಜೀವನ ಆರಂಭ ಮಾಡಿದ್ದರು. 1996ರಲ್ಲಿ ಸಿಎಂ ಜೆ.ಹೆಚ್.ಪಟೇಲರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1997, 2003ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ಆಯ್ಕೆ ಆಗಿದ್ದರು. 2008ರಲ್ಲಿ ಬಿಜೆಪಿಗೆ ಸೇರ್ಪಡೆ, ಶಿಗ್ಗಾಂವಿಯಿಂದ ವಿಧಾನಸಭೆಗೆ ಆಯ್ಕೆಯಾದರು ಬಿ.ಎಸ್.ವೈ, ಡಿ.ವಿ.ಎಸ್, ಶೆಟ್ಟರ್ ಸರ್ಕಾರದಲ್ಲಿ ಸಚಿವರಾಗಿದ್ದರು.
ಬಸವರಾಜ ಬೊಮ್ಮಾಯಿ ಅವರ ತಾಯಿಯ ಹೆಸರು ಗಂಗಮ್ಮ, ಪತ್ನಿ ಚನ್ನಮ್ಮ. ಭರತ್ ಮತ್ತು ಅದಿತಿ ಇಬ್ಬರು ಮಕ್ಕಳಿದ್ದಾರೆ.