– ರ‍್ಯಾಲಿಲಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದ ಮೋದಿ
ಬೀದರ್/ದಿಸ್ಪುರ್: ಬೈ ಎಲೆಕ್ಷನ್ ಅಖಾಡದ ಕಲಿಗಳು ಯಾರೆಂದು ಫಿಕ್ಸ್ ಆಗಿದೆ. ಬಸವಕಲ್ಯಾಣದಲ್ಲಿ ಬಿಜೆಪಿಗೆ ಬಂಡಾಯದ ಕಾಟ ಎದುರಾಗಿದೆ.
ನಾಮಪತ್ರ ವಾಪಸ್‍ಗೆ ಕೊನೆಯ ದಿನವಾದ ಇಂದು ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಕಣದಿಂದ ಹಿಂದೆ ಸರಿಯಲಿಲ್ಲ. ಬದಲಾಗಿ ಬಿಜೆಪಿ ನಾಯಕರು ಬರಂಗಿಲ್ಲ ಅಂತಾ ಮನೆ ಮುಂದೆ ಬೋರ್ಡ್ ಹಾಕಿದ್ರು.
Advertisement
Advertisement
ಪಕ್ಷಾಧ್ಯಕ್ಷ ನಳಿನ್ ಕಟೀಲ್ ಮಾತಾಡಿ,ಇಲ್ಲಿ ಗೆಲ್ಲೋದು ನಾವೇ ಅಂದ್ರು. ಎನ್‍ಸಿಪಿಯ ಎಂಜಿ ಮೂಳೆ ಕಣದಿಂದ ಹಿಂದೆ ಸರಿದಿದ್ದು, ಇನ್ನೆರಡು ದಿನಗಳಲ್ಲಿ ಬಿಜೆಪಿ ಸೇರುವ ಸಂಭವ ಇದೆ. ಬೆಳಗಾವಿಯಲ್ಲಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು, ಮಸ್ಕಿಯಲ್ಲಿ ಇಬ್ಬರು ಪಕ್ಷೇತರರು ಉಮೇದುವಾರಿಕೆ ಹಿಂಪಡೆದ್ರು.
Advertisement
Advertisement
ಕಳೆದ ಚುನಾವಣೆ ಸೋಲು ಸಿದ್ದರಾಮಯ್ಯಗೆ ಇನ್ನೂ ಕಾಡ್ತಿರುವಂತಿದೆ. ನಾನು ಕೊಟ್ಟಿದ್ದ ಅನ್ನ ತಿಂದು ನನ್ನನ್ನೇ ಸೋಲಿಸಿ ಬಿಟ್ರಲ್ಲ ಎಂದು ಚಾಮುಂಡೇಶ್ವರಿ ಮತದಾರರ ಬಗ್ಗೆ ಅಸಮಾಧಾನ ಹೊರಹಾಕಿದ್ರು. ಅನ್ನಭಾಗ್ಯದ ಅಕ್ಕಿ ಕಡಿತ ಮಾಡಿರೋ ಸಿಎಂ ಬಗ್ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರು. ಇದಕ್ಕೆ ತಿರುಗೇಟು ನೀಡಿದ ಸಚಿವ ಬೈರತಿ ಬಸವರಾಜ್, ಸಿದ್ದರಾಮಯ್ಯ ಮಾತಿನ ಮೇಲೆ ಹಿಡಿತ ಇಟ್ಕೋಬೇಕು, ಇಲ್ಲ ಅಂದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದ್ರು.
ಇತ್ತ ಪಂಚರಾಜ್ಯ ಚುನಾವಣೆ ಪ್ರಚಾರ ಕಣ ರಂಗೇರುತ್ತಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಚೆನ್ನೈನಲ್ಲಿ ಖುಷ್ಬೂ ಪರ ಭರ್ಜರಿ ರೋಡ್ ಶೋ ನಡೆಸಿದ್ರು. ಅಸ್ಸಾಂನಲ್ಲಿ ಮೋದಿ ಭಾಷಣದ ವೇಳೆ, ಕಾರ್ಯಕರ್ತರೊಬ್ಬರು ಅಸ್ವಸ್ಥರಾದರು. ಇದನ್ನು ಗಮನಿಸಿದ ಮೋದಿ, ಭಾಷಣ ನಿಲ್ಲಿಸಿ ಆ ಕಾರ್ಯಕರ್ತನ ಆರೋಗ್ಯ ವಿಚಾರಿಸಲು ವೈದ್ಯರಿಗೆ ಸೂಚಿಸಿದ್ರು.