ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಒಬ್ಬರಾದ ಬಳಿಕ ಒಬ್ಬರು ನನಗೆ ಸಚಿವ ಸ್ಥಾನ ಬೇಕೇ ಬೇಕೆಂದು ದೆಹಲಿಗೆ ಪ್ರಯಾಣ ಮಾಡುತ್ತಿದ್ದಾರೆ. ಈ ಮೊದಲು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ದೆಹಲಿ ಪ್ರವಾಸ ಮಾಡಿದ್ರೆ. ಈಗ ಸಿರಗುಪ್ಪಾ ಶಾಸಕ ಸೋಮಲಿಂಗಪ್ಪ ಅವರು ದೆಹಲಿ ಪ್ರವಾಸ ಮಾಡಿ ಬಂದಿದ್ದಾರೆ.
Advertisement
ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರಚನೆಯಾದ ಬಳಿಕ, ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಸಚಿವಗಿರಿಗಾಗಿ ಲಾಬಿ ನಡೆಸುವಲ್ಲಿ ಜಿಲ್ಲೆಯ ಶಾಸಕರು ಕೂಡ ಹೊರತಾಗಿಲ್ಲ. ಈ ಮೊದಲು ಬಿಜೆಪಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ದೆಹಲಿ ಪ್ರವಾಸ ಮಾಡಿದ್ದ ಅವರು, ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದಾರೆ. ಇದನ್ನೂ ಓದಿ: ಸಚಿವ ಸಂಪುಟ ರಚನೆಯಲ್ಲಿ ಮಧ್ಯ ಪ್ರವೇಶಿಸುವುದಿಲ್ಲ: ಬಿ.ಎಸ್ ಯಡಿಯೂರಪ್ಪ
Advertisement
Advertisement
ರಾಜ್ಯ ಬಿಜೆಪಿ ವಿಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್ ಹಾಗೂ ಕಿಶನ್ ರೆಡ್ಡಿ ಅವರನ್ನು ಶಾಸಕ ಸೋಮಶೇಖರ್ ರೆಡ್ಡಿ ಭೇಟಿ ಮಾಡಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದಾರೆ. ಗಣಿ ನಾಡಿಗೆ ಒಂದು ಮಂತ್ರಿ ಸ್ಥಾನ ನಿಡುವಂತೆ ವರಿಷ್ಠರ ಮನವಿ ಮಾಡಿದ್ದು, ಒಂದು ಕಾಲದಲ್ಲಿ ಬಳ್ಳಾರಿಯಿಂದ ಮೂವರು ಸಚಿವರಾಗಿದ್ರು, ಈಗ ಒಬ್ಬರೂ ಇಲ್ಲ. ಬಳ್ಳಾರಿಗೆ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಗದ ಹಿನ್ನೆಲೆ ಗಣಿ ನಾಡಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಇದೇ ಕಾರಣಕ್ಕೆ ಪಾಲಿಕೆ ಚುನಾವಣೆ ಕೂಡಾ ಸೋತಿದ್ದೇವೆ, ಬಳ್ಳಾರಿ ಇಬ್ಬಾಗ ಮಾಡಿದ ಸಿಟ್ಟು ಜನರಲ್ಲಿದೆ. ನನಗೆ ಸಚಿವ ಸ್ಥಾನ ನೀಡಿ ಜಿಲ್ಲೆಯಲ್ಲಿ ಬಿಜೆಪಿ ಮನ್ನಣೆ ಸಿಗುವಂತೆ ಮಾಡಿ ಅಂತಾ ವಿಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್ ಹಾಗೂ ಕಿಶನ್ ರೆಡ್ಡಿಗೆ ಮನವಿ ಮಾಡಿದ ರೆಡ್ಡಿ ಮನವಿ ಮಾಡಿದ್ದಾರೆ.