ಬಳ್ಳಾರಿ: ಜಿಲ್ಲೆಯಲ್ಲಿಂದು ಹೊಸದಾಗಿ 380 ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,263 ಕ್ಕೇರಿಕೆಯಾಗಿದೆ.
ಇದುವರೆಗೂ 5661 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗೆ ಹೋಲಿಕೆ ಮಾಡಿದ್ರೆ 10 ಸಾವಿರ ಗಡಿ ದಾಟಿದ ಮೊದಲ ಜಿಲ್ಲೆ. ಈ ಹಿಂದೆಯೇ ತಜ್ಞರು ಹೇಳಿರುವ ಹಾಗೆ ಆಗಸ್ಟ್ ತಿಂಗಳ ಕೊನೆಯಲ್ಲಿ ಸೋಂಕು ಹೆಚ್ಚಾಗಲಿದೆ ಎನ್ನಲಾಗಿತ್ತು. ಆದ್ರೆ ಈಗ ಆಗಸ್ಟ್ ಮೊದಲ ವಾರದಲ್ಲಿಯೇ ಸೋಂಕು 10 ಸಾವಿರದ ಗಡಿ ದಾಟಿದೆ.

ಇತ್ತ ಜಿಲ್ಲೆಯಲ್ಲಿ ಸಾವಿನ ಸರಣಿ ಸಹ ಮುಂದುವರಿದಿದ್ದು ಇಂದು ಒಂದೇ ದಿನ 6 ಜನರ ಸಾವು ಸಂಭವಿಸಿದೆ. ಈ ಮೂಲಕ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಈವರಗೆ ಬಲಿಯಾದವರ ಸಂಖ್ಯೆ 114 ಆಗಿದೆ. ಜಿಲ್ಲಾಡಳಿತ ಅತೀ ಹೆಚ್ಚು ಪರೀಕ್ಷೆ ಮಾಡುತ್ತಿರೋದರಿಂದ ಸೋಂಕಿತರ ಸಂಖ್ಯೆ ಸಹಜವಾಗಿ ಏರಿಕೆ ಆಗಿದೆ. ಸೋಂಕಿತರನ್ನು ಬೇಗ ಪತ್ತೆ ಹಚ್ಚಿ ಆದಷ್ಟು ಬೇಗ ಗುಣಮುಖ ಮಾಡಿ ಸಾವಿನ ಪ್ರಮಾಣ ಕಡಿಮೆ ಮಾಡುವ ಗುರಿಯಲ್ಲಿ ಜಿಲ್ಲಾಡಳಿತ ಕೆಲಸ ಮಾಡುತ್ತಿದೆ.