ಬಳ್ಳಾರಿ: ಮಹಾಮಾರಿ ಕೊರೊನಾ ಗಣಿ ಜಿಲ್ಲೆಯಲ್ಲಿ ಮತ್ತೊಂದು ಶತಕ ದಾಖಲಿಸಿದೆ. ಜಿಲ್ಲೆಯಲ್ಲಿ ಹೊಸದಾಗಿ ಇಂದು 105 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1787ಕ್ಕೇರಿಕೆಯಾಗಿದೆ.
ಜಿಲ್ಲೆಯಲ್ಲಿ ಒಂದೇ ದಿನ 105 ಮಂದಿಗೆ ಕೊರೊನಾ ದೃಢಪಟ್ಟಿದ್ದು, 1,024 ಮಂದಿ ಗುಣಮುಖರಾಗಿದ್ದಾರೆ. ಜೊತೆಗೆ ಸಾವಿನ ಸಂಖ್ಯೆ ಮುಂದುವರಿದಿದ್ದು ಇಂದು ನಾಲ್ವರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಈವರೆಗೆ 46 ಮಂದಿ ಸಾವನ್ನಪ್ಪಿದ್ದು, 722 ಸಕ್ರಿಯ ಪ್ರಕರಣಗಳಿವೆ. ಇವತ್ತು 32 ಜನರು ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ 86 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1315, ಯಾದಗಿರಿ 162, ಮೈಸೂರು 151, ದಕ್ಷಿಣ ಕನ್ನಡ 131, ಬಳ್ಳಾರಿ 106, ಕಲಬುರಗಿ 89, ವಿಜಯಪುರ 86, ಶಿವಮೊಗ್ಗ 74, ಧಾರವಾಡ 71, ಉಡುಪಿ 53, ತುಮಕೂರು 48, ರಾಯಚೂರು 45, ದಾವಣಗೆರೆ 45, ಚಿಕ್ಕಬಳ್ಳಾಪುರ 42, ಉತ್ತರ ಕನ್ನಡ 37, ಬಾಗಲಕೋಟೆ 37, ಕೊಪ್ಪಳ 31, ಮಂಡ್ಯ 30, ಕೊಡಗು 29, ಬೆಳಗಾವಿ 27, ಹಾಸನ 25, ಬೀದರ್ 23, ಬೆಂಗಳೂರು ಗ್ರಾಮಾಂತರ 21, ಕೋಲಾರ 21, ಚಿಕ್ಕಮಗಳೂರು 10, ಚಾಮರಾಜನಗರ 9, ಚಿತ್ರದುರ್ಗ 8, ಗದಗ ಮತ್ತು ಹಾವೇರಿಯಲ್ಲಿ ತಲಾ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 41,581ಕ್ಕೇರಿಕೆಯಾಗಿದ್ದು, 24,572 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 16,248 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.