ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 46 ವರ್ಷದ ಹರಪನಹಳ್ಳಿಯ ಮೂಲದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.
ಮೂರನೇ ಹಂತದ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯದ ಅಹಮಾಬಾದ್ ನಗರದಿಂದ ಎರಡ್ಮೂರು ದಿನಗಳ ಹಿಂದಷ್ಟೇ ಹರಪನಹಳ್ಳಿಗೆ ವ್ಯಕ್ತಿ ಆಗಮಿಸಿದ್ದರು. ಅಂತಾರಾಜ್ಯ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಕೋವಿಡ್-19 ಸೋಂಕಿನ ತಪಾಸಣೆಗೆ ಒಳಪಡಿಸಿ ಗಂಟಲು ದ್ರವ ಪರೀಕ್ಷಿಸಲಾಗಿತ್ತು. ಅವರನ್ನ ಜಿಂದಾಲ್ ಓಪಿಜೆ ಸೆಂಟರ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
Advertisement
Advertisement
ವ್ಯಕ್ತಿಯ ಪರೀಕ್ಷಾ ವರದಿ ಬಂದಿದ್ದು, ಇವರಿಗೆ ಕೊರೊನಾ ಸೋಂಕು ತಗುಲಿರುವುದು ಖಾತ್ರಿಯಾಗಿದೆ. ಈ ಹಿನ್ನೆಲೆ ಇಂದು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಸೋಂಕಿತ ವ್ಯಕ್ತಿಯನ್ನು ಶಿಫ್ಟ್ ಮಾಡಲಾಗುತ್ತಿದೆ ಎಂದು ಡಿಹೆಚ್‍ಒ ಡಾ.ಹೆಚ್.ಎಲ್ ಜನಾರ್ದನ್ ತಿಳಿಸಿದ್ದಾರೆ. ವ್ಯಕ್ತಿಯ ಊರು ಹರಪನಹಳ್ಳಿ ತಾಲೂಕೆಂದು ತಿಳಿದುಬಂದಿದೆ. ಟ್ರಾವಲ್ ಹಿಸ್ಟರಿಯ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ತಿಳಿಸಿದರು.
Advertisement
Advertisement
ಬಳ್ಳಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. 13 ಮಂದಿ ಕೊರೊನಾಗೆ ಚಿಕಿತ್ಸೆ ಪಡೆದು ಗುಣಮುಖರಾದವರನ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಐಸೋಲೇಷನ್‍ನಲ್ಲಿ ಇರುವವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.