ಬಳ್ಳಾರಿ: ಗಣಿನಾಡಲ್ಲಿ ಸಂಪೂರ್ಣವಾಗಿ ಅಕ್ರಮ ಗಣಿಗಾರಿಕೆ ಹಾಗೂ ಸಾಗಾಟ ಸದ್ದು ಮತ್ತೆ ಶುರುವಾಗಿ ಬಿಟ್ಟಿದೆ. ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಅಕ್ರಮ ಗಣಿ ಸಾಗಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಲಾರಿಗಳನ್ನ ವಶಕ್ಕೆ ಪಡೆದಿದ್ದಾರೆ.
Advertisement
ಗಣಿನಾಡು ಬಳ್ಳಾರಿ ಅಂದರೆ ಅಕ್ರಮ ಗಣಿಗಾರಿಕೆ, ಅಕ್ರಮ ಗಣಿ ಸಾಗಾಟ ಎನ್ನುವುದು ಇಡೀ ದೇಶಕ್ಕೇ ಸಾರಿತು. ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ಸಿಬಿಐ ತನಿಖೆ ಆರಂಭಿಸಿದ ಬಳಿಕ ಸುಪ್ರೀಂ ಕೋರ್ಟ್ ಗಣಿ ರಪ್ತಿಗೆ ನಿಷೇಧ ಹೇರಿತ್ತು. ಪ್ಲಾಂಟ್ ಇದ್ದವರಿಗೆ ಗಣಿಗಾರಿಕೆ ಮಾತ್ರ ಅವಕಾಶ ಮಾಡಿ ಕೊಟ್ಟಿತ್ತು. ಆದರೆ ಇಂದು ಸುಪ್ರೀಂ ಕೋರ್ಟ್ ಆದೇಶದ ಮಧ್ಯೆಯೂ ಕೋಟಿ ಕೋಟಿ ಬೆಲೆ ಬಾಳುವ ಕಬ್ಬಿಣದ ಗಣಿಯನ್ನು ಆಂಧ್ರಕ್ಕೆ ಅಕ್ರಮವಾಗಿ ರವಾನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
Advertisement
Advertisement
ಬಳ್ಳಾರಿ ಪೊಲೀಸರು ಫ್ಲೈ ಹ್ಯಾಶ್ ತುಂಬಿಕೊಂಡು ಆಂಧ್ರಕ್ಕೆ ತೆರಳುತ್ತಿದ್ದ, ಲಾರಿಗಳ ಮೇಲೆ ನಿಗಾ ಇಟ್ಟು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಫ್ಲೈ ಹ್ಯಾಶ್ ಒಯ್ಯುವ ನೆಪದಲ್ಲಿ ಅದಿರನ್ನ ಸಾಗಾಟ ಮಾಡುತ್ತಿರುವ ಅಂಶ ಗೊತ್ತಾಗಿದೆ. ಪ್ಲೈ ಹ್ಯಾಶ್ ಮಧ್ಯೆ 43 ಪಸೆರ್ಂಟ್ ನಷ್ಟು ಅದಿರನ್ನು ತುಂಬಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 20 ಲಾರಿಗಳನ್ನು ಸೀಜ್ ಮಾಡಲಾಗಿದೆ.
Advertisement
ಈ ಕುರಿತಂತೆ ಕಾರ್ಯಾಚರಣೆ ನಡೆದ ಖಾಕಿ ಟೀಂ ಅದಿರು ಸಾಗಾಣಿಕೆ ಮಾಡುತ್ತಿದ್ದ ಲಾರಿ ಡ್ರೈವರ್ಸ್ ಹಾಗೂ ಕ್ಲೀನರ್ ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಅದಿರು ಸಾಗಾಟವನ್ನು ಬಳ್ಳಾರಿ ಎಸ್ಪಿ ಸೈದುಲ್ ಅಡಾವತ್ ದೃಢಪಡಿಸಿದ್ದು, ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಇತ್ತ ಅದಿರು ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಸ್ಪಾತ್ ಎನ್ನುವ ಸ್ಪಾಂಜ್ ಐರೆನ್ ಕಂಪನಿಯಿಂದ ಫ್ಲೈ ಹ್ಯಾಶ್ ರವಾನೆಗೆ ಪರವಾನಿಗೆ ಪಡೆದು ಅದರಲ್ಲಿ ಅದಿರನ್ನ ಸಾಗಾಟ ಮಾಡಲಾಗುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಮಾತನಾಡಿರುವ ಲಾರಿ ಡ್ರೈವರ್‍ಗಳು ಇದು ಪ್ಲೈ ಹ್ಯಾಶ್ ಎಂದುಕೊಂಡಿದ್ವಿ, ಆದರೆ ಅದಿರು ತುಂಬಲಾಗಿದೆ ಎನ್ನುವುದು ಗೊತ್ತಿರಲಿಲ್ಲ. ಇದೇ ರೀತಿ ಇಪ್ಪತ್ತು ದಿನಗಳಿಂದ ಸಾಗಾಟ ಮಾಡಿದ್ದೇವೆ. ನಮ್ಮದೇನು ತಪ್ಪಿಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ:ದೇವಸ್ಥಾನದಲ್ಲಿ ಬಿಜೆಪಿ ಮುಖಂಡನ ಮಗಳ ಅದ್ಧೂರಿ ವಿವಾಹ- ಜಿಲ್ಲಾಡಳಿತದಿಂದ ತಡೆ