– ಇದರ ವಿಶೇಷತೆಯೇನು..?
ಮುಂಬೈ: ಮಾಂಸದ ಗುಣಮಟ್ಟಕ್ಕೆ ಹೆಸರು ವಾಸಿಯಾದ ಮದ್‍ಗ್ಯಾಲ್ ತಳಿಯ ಕುರಿಗೆ 70 ಲಕ್ಷ ರೂಪಾಯಿ ಬೇಡಿಕೆ ಬಂದಿದೆ.
ಉತ್ತಮ ಮೈಕಟ್ಟು ಹೊಂದಿರುವ ಮದ್‍ಗ್ಯಾಲ್ ತಳಿಯ ಕುರಿಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಮಾಲೀಕರು ಕುರಿ ಮಾರಾಟದಲ್ಲಿ ಚೌಕಾಶಿ ಮಾಡಲು ಪ್ರಾರಂಭಿಸಿದ್ದಾರೆ. ಮದ್‍ಗ್ಯಾಲ್ ತಳಿಯ ಕುರಿ ಎತ್ತರವಾಗಿದ್ದು, ಇತರ ತಳಿಗಿಂತ ಹೆಚ್ಚಿನ ಬೆಳವಣಿಗೆಯನ್ನು ಹೊಂದುತ್ತವೆ. ಆದ್ದರಿಂದ ಈ ಕುರಿಗೆ ಹೆಚ್ಚಿನ ಬೇಡಿಕೆಯಿದೆ. ರಾಜ್ಯದ ಪಶುಸಂಗೋಪನಾ ಇಲಾಖೆಯು ಮದ್‍ಗ್ಯಾಲ್ ಸಂಖ್ಯೆಯನ್ನು ಹೆಚ್ಚಿಸಲು ವ್ಯಾಪಕ ಪ್ರಯತ್ನಗಳನ್ನು ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಈ ವಿಶಿಷ್ಟ ತಳಿಯ ವೃದ್ಧಿಗೆ ಒತ್ತು ನೀಡುತ್ತಿದೆ. ಸದ್ಯ ಸಾಂಗ್ಲಿ ಜಿಲ್ಲೆಯೊಂದರಲ್ಲೆ 1.50 ಲಕ್ಷಕ್ಕೂ ಅಧಿಕ ಮದ್‍ಗ್ಯಾಲ್ ಕುರಿಗಳಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂಗ್ಲಿ ಜಿಲ್ಲೆಯೊಂದರಲ್ಲೇ 1.50 ಲಕ್ಷಕ್ಕೂ ಅಧಿಕ ಮದ್‍ಗ್ಯಾಲ್ ಕುರಿಗಳಿವೆ. ಈ ಗ್ರಾಮದ ಕುರುಬನಾದ ಬಾಬು ಮೆಟ್ಕಾರಿ ಬಳಿ 200ಕ್ಕೂ ಹೆಚ್ಚು ಕುರಿಗಳಿವೆ. ಇತ್ತೀಚೆಗೆ ಜಾತ್ರೆಯೊಂದರಲ್ಲಿ ಖರೀದಿದಾರನೊಬ್ಬ ಮದ್‍ಗ್ಯಾಲ್ ಕುರಿಗಳಲ್ಲಿ ಒಂದನ್ನು 70 ಲಕ್ಷಕ್ಕೆ ಖರೀದಿಸಲು ಮುಂದಾದಾಗ ಆಶ್ಚರ್ಯಚಕಿತನಾದೆ. ಈ ಕುರಿಗಳ ನಿಜವಾದ ಹೆಸರು ಸರ್ಜಾ, ಮಾರುಕಟ್ಟೆಯಲ್ಲಿ ಈ ಕುರಿಗೆ ಹೆಚ್ಚು ಬೇಡಿಕೆ ಇರುವುದರಿಂದ ಹೆಮ್ಮೆಯಿಂದ ಸರ್ಜಾ ಎಂದು ಕರೆಯುತ್ತೇವೆ. ಈ ಕುರಿ ಮರಿಗಳು ಕೂಡ 5 ರಿಂದ 10 ಲಕ್ಷ ರೂ.ವರೆಗೆ ಮಾರಾಟವಾಗಿವೆ. ಈ ಕುರಿಗಳು ನಮ್ಮ ಕುಟುಂಬಕ್ಕೆ ಬಹಳಷ್ಟು ಅದೃಷ್ಟ ತಂದು ಕೊಟ್ಟಿದೆ ಮಾರಲು ಮನಸ್ಸಿಲ್ಲ ಎಂದು ಕುರಿ ಮಾಲೀಕ ಬಾಬು ತಿಳಿಸಿದ್ದಾರೆ.
ನಾನು ಮಾರಾಟ ಮಾಡಲು ನಿರಾಕರಿಸಿದ್ದೇನೆ. ಆದರೆ ಅವರು ಒತ್ತಾಯಿಸಿದಾಗ ನಾನು 1.50 ಕೋಟಿ ಹೇಳಿದೆ. ಏಕೆಂದರೆ ಯಾರು ಕೃಷಿ, ಪ್ರಾಣಿಗಳಿಗೆ ಅಷ್ಟು ಹಣವನ್ನು ನೀಡುವುದಿಲ್ಲ ಎಂದು ನನಗೆ ತಿಳಿದಿದೆ. ಮದ್‍ಗ್ಯಾಲ್ ತಳಿಯ ಹಲವಾರು ಕುರಿಗಳಿವೆ. ಆದರೆ ಸರ್ಜಾ ಸಂತಾನೋತ್ಪತ್ತಿ ಸಾಮಥ್ರ್ಯದ ದೃಷ್ಟಿಯಿಂದ ಉತ್ತಮವಾಗಿದೆ. ಈ ಕುರಿಗಳಿಂದ ಸಾಕುವ ಕುರಿಮರಿಯನ್ನು 5 ಲಕ್ಷದಿಂದ 10 ಲಕ್ಷದವರೆಗೆ ಮಾರಾಟ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮದ್‍ಗ್ಯಾಲ್ ಕುರಿಗಳು ಕಣ್ಣುಗಳ ಸುತ್ತಲೂ ಕಂದು ಬಣ್ಣದ ಉಂಗುರವನ್ನು ಹೊಂದಿವೆ. ರೋಮನ್ ಮೂಗನ್ನು ಈ ಕುರಿಗಳು ಹೊಂದಿರುತ್ತವೆ. ಆದರ ಕಿವಿಗಳು ಉದ್ದವಾಗಿರುತ್ತವೆ.
ಮಹಾರಾಷ್ಟ್ರ ಕುರಿ ಮತ್ತು ಮೇಕೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಸಚಿನ್ ತೆಕಾಡೆ ಅವರು ಮದ್‍ಗ್ಯಾಲ್ ತಳಿಯ ವಿಶೇಷ ಗುಣಗಳು, ಅದರ ಉಪಯುಕ್ತತೆ, ಹೆಚ್ಚಿನ ಬೇಡಿಕೆ ಇದೆ. ಸಾಕಾಣಿಕೆ ಇಲಾಖೆ ತಳಿಯನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿದೆ. 2003 ರಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ, ಸಾಂಗ್ಲಿಯಲ್ಲಿ ಕೇವಲ 5,319 ಮದ್‍ಗ್ಯಾಲ್ ಕುರಿಗಳು ಲಭ್ಯವಿವೆ ಎಂದು ತಿಳಿದುಬಂದಿದೆ. ಕಳೆದ ಹಲವಾರು ವರ್ಷಗಳಿಂದ ಈ ತಳಿಯ ಬಗ್ಗೆ ಸಂಶೋಧನೆನ ಡೆಯುತ್ತಿದೆ. ಅಳಿವಿನಂಚಿನಲ್ಲಿರುವ ಮದ್‍ಗ್ಯಾಲ್ ಕುರಿಗಳನ್ನು ಸಂರಕ್ಷಿಸುತ್ತೇವೆ ಎಂದು ಹೇಳಿದ್ದಾರೆ.