ಬೆಂಗಳೂರು: ಬರೋಬ್ಬರಿ 54 ದಿನಗಳ ಬಳಿಕ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ. ಇಂದಿನಿಂದ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್ ಸೇವೆ ಪುನರ್ ಆರಂಭವಾಗಿದೆ.
Advertisement
ಹೌದು. ಇಂದು ಸುಮಾರು 2 ಸಾವಿರ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿಯಲಿವೆ. 3000 ಕೆಎಸ್‍ಆರ್‍ಟಿಸಿ, 2,000 ಈಶಾನ್ಯ ಸಾರಿಗೆ ಬಸ್ ಗಳು ಹಾಗೂ 1,500 ವಾಯುವ್ಯ ಸಾರಿಗೆ ಬಸ್ ಗಳು ಇಂದು ಸಂಚಾರ ಮಾಡಲಿವೆ. ಇದನ್ನೂ ಓದಿ: ಮತ್ತೆ ಬಿಜೆಪಿ ಜೊತೆ ಹೋಗೋಣ: ಸಿಎಂ ಠಾಕ್ರೆಗೆ ಪತ್ರ ಬರೆದ ಶಿವಸೇನೆ ಎಂಎಲ್‍ಎ
Advertisement
Advertisement
ಬೆಳಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಬಸ್ ಸಂಚಾರ ಇರಲಿದೆ. ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿರುವುದು ಕಂಡು ಬಂದಿದೆ. ಬಿಎಂಟಿಸಿ, ಕೆ ಎಸ್ ಆರ್ ಟಿಸಿ ಬಸ್ ಗಳಿಗಾಗಿ ಪ್ರಯಾಣಿಕರು ಕಾದು ಕುಳಿತಿದ್ದಾರೆ.
Advertisement
ಇತ್ತ ಕೆಎಸ್‍ಆರ್‍ಟಿಸಿ ಸಂಚಾರಕ್ಕೆ ಅವಕಾಶ ಬೆನ್ನಲ್ಲೆ ಜನ ಊರಿನತ್ತ ಹೊರಟಿದ್ದಾರೆ. ಅನ್ ಲಾಕ್ ಹಿನ್ನೆಲೆ ಜನ ಊರುಗಳತ್ತ ತಂಡೋಪ ತಂಡವಾಗಿ ಹೊರಟಿದ್ದಾರೆ. ಸರ್ಕಾರಿ ಬಸ್ ಗಳಲ್ಲಿ ಕೇವಲ 50ರಷ್ಟು ಜನರಿಗೆ ಮಾತ್ರ ಅವಕಾಶ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ತುಮಕೂರು ರಸ್ತೆಯ ಗೋವರ್ಧನ ಬಸ್ ನಿಲ್ದಾಣದ ಬಳಿ ಊರಿನತ್ತ ಹೋಗಲು ಸರ್ಕಾರಿ ಬಸ್, ಖಾಸಗಿ ವಾಹನಗಳಿಗೆ ಜನ ಕಾದು ನಿಂತಿರುವುದು ಕಂಡು ಬಂದಿದೆ.