ನೆಲಮಂಗಲ: ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ನೀಡುವ ಪಬ್ಲಿಕ್ ಟಿವಿ, ರೋಟರಿ ಕ್ಲಬ್ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ನೆಲಮಂಗಲದ ಸ್ಥಳೀಯ ದಾನಿಗಳು ಕೈಜೋಡಿಸಿದ್ದಾರೆ. ಇಂದು ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರದಿಮಂಡಿಗೆರೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ 61 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.
ರಾಜ್ಯಾದ್ಯಂತ ಯಶಸ್ವಿಯಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಟ್ಯಾಬ್ ವಿತರಣೆ ಮೂಲಕ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಬೆಂಗಳೂರು ವಿಭಾಗದ ಪ್ರೇಮಾ ಚಾಲನೆ ನೀಡಿದರು. ನಂತರ ಟ್ಯಾಬ್ ವಿತರಣೆ ಮಾಡಲಾಯಿತ್ತು.
ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ದಾನಿಗಳಾದ ಹರ್ಷ ಶಿವಕುಮಾರ್, ದಾಸನಪುರದ ಲಕ್ಷ್ಮಣಮೂರ್ತಿ ಬೂದಿಹಾಳ್ ಗೋವಿಂದರಾಜು, ಕೃಷ್ಣಮೂರ್ತಿ, ಮಂಜುನಾಥ್ ನೆಲಮಂಗಲ ಬಿಇಓ ರಮೇಶ್ ಶಾಲೆಯ ಶಿಕ್ಷಕರು ಹಾಜರಿದ್ದು ಪಬ್ಲಿಕ್ ಟಿವಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.