ಬಯಲು ಪ್ರದೇಶದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು

Public TV
1 Min Read
field hospita

ಭೋಪಾಲ್: ಆಸ್ಪತ್ರೆಗಳಿಗೆ ತೆರಳಲು ಭಯಪಟ್ಟು ಹೊಲಗಳಲ್ಲಿ ಮರಗಳ ಕೆಳಗೆ ಹಳ್ಳಿಗಳ ವೈದ್ಯರಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದು ಮಧ್ಯಪ್ರದೇಶದಲ್ಲಿ ಕಂಡು ಬಂದಿದೆ.

ಮಧ್ಯಪ್ರದೇಶದ ಅಗರ್-ಮಾಲ್ವಾ ಜಿಲ್ಲೆಯ ಹಳ್ಳಿಗಳಲ್ಲಿ ರಸ್ತೆಯ ಪಕ್ಕದಲ್ಲಿಯೇ ಕೊರೊನಾ ಸೋಂಕಿತರು ಮಲಗಿದ್ದಾರೆ. ಮರಗಳ ರಂಬೆಗೆ ಡ್ರಿಪ್ ಬಾಟಲಿಗಳನ್ನು ತೂಗಿಹಾಕಿ ಸ್ಥಳೀಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

MADYA PRADESH RURAL

ಗ್ರಾಮಗಳಲ್ಲಿ ಜ್ವರ ಹಾಗೂ ನೆಗಡಿ ವ್ಯಾಪಕವಾಗಿ ಹರಡಿದೆ. ಆದರೆ ಜನರು ಮಾತ್ರ ಸರ್ಕಾರಿ ಆಸ್ಪತ್ರೆಗೆ ತೆರಳಲು ಹಿಂಜರಿಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಅದಕ್ಕಾಗಿ ನಾವು ಹೋಗುವುದಿಲ್ಲ. ಸ್ಥಳೀಯ ವೈದ್ಯರಿಂದಲೇ ಚಿಕಿತ್ಸೆ ಪಡೆಯುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ಹೆದ್ದಾರಿಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಕಿತ್ತಳೆ ತೋಪಿನಲ್ಲಿ ಕಾರ್ಡ್‍ಬೋರ್ಡ್ ಶಿಟ್‍ಗಳನ್ನು ಹಾಕಿ ರೋಗಿಗಳು ಮಲಗಿದ್ದಾರೆ. ಸುಮಾರು 10 ಹಳ್ಳಿಗಳಿಂದ ಜನರು ಚಿಕಿತ್ಸೆಗೆಂದು ಇಲ್ಲಿಗೆ ಬರುತ್ತಿದ್ದಾರೆ. ಹೀಗೆ ಬಯಲು ಪ್ರದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯದ ವೀಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸ್ಥಳಿಯ ವೈದ್ಯರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ನೆಗಡಿ, ಕೆಮ್ಮು ಲಕ್ಷಣಗಳು ಕಂಡು ಬಂದ ತಕ್ಷಣ ಸರ್ಕಾರಿ ವೈದ್ಯರನ್ನು ಭೇಟಿ ಮಾಡಿ ಎಂದು ಆರೋಗ್ಯಾಧಿಕಾರಿ ಮನಿಶ್ ಕುರ್ಲಿ ಹೇಳಿದ್ದಾರೆ. ಮುಖ್ಯ ಆರೋಗ್ಯಾಧಿಕಾರಿ ಸಮಾಂದರ್ ಸಿಂಗ್ ಮಾಲ್ವಿಯಾ ತಂಡವೊಂದನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ಆದರೆ ಆ ವೇಳೆಗೆ ಅಲ್ಲಿ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *