‘ಬದುಕು ಯಾರ ಕೈಯಲ್ಲೂ ಇಲ್ಲ’- ವೆಂಕಟ್ ಮೇಲಿನ ಹಲ್ಲೆಗೆ ವಿಜಿ ಖಂಡನೆ

Public TV
2 Min Read
HUCCHA VIJAY

ಬೆಂಗಳೂರು: ನಟ ಜಗ್ಗೇಶ್ ಬಳಿಕ ಇದೀಗ ದುನಿಯಾ ವಿಜಯ್ ಅವರು ಮಂಡ್ಯದಲ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದ್ದಾರೆ.

ಹುಚ್ಚ ವೆಂಕಟ್ ಪರಿಸ್ಥಿತಿ ಕಂಡು ಬೇಸರಗೊಂಡ ವಿಜಿ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಬದುಕು ಯಾರ ಕೈಯಲ್ಲೂ ಇಲ್ಲ. ಇಂದು ಒಬ್ಬ ರಾಜ ಭಿಕ್ಷೆ ಬೇಡಬಹುದು. ಅದೇ ಭಿಕ್ಷುಕ ನಾಳೆ ರಾಜನಾಗಬಹುದು. ನಾವು ಅವರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವುದು ಮಾನವೀಯತೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

duniya vijay 1 1

ಫೇಸ್‍ಬುಕ್ ಪೋಸ್ಟ್ ನಲ್ಲೇನಿದೆ..?
ಹುಚ್ಚ ವೆಂಕಟ್ ಅವರಿಗೆ ಬೀದಿಯಲ್ಲಿ ಹೊಡೆಯುವ ವಿಡಿಯೋಗಳು ಕಳೆದ ಎರಡು ದಿನಗಳಿಂದ ವೈರಲ್ ಆಗಿವೆ. ‘ಹುಚ್ಚ’ ಎಂದು ಸ್ವತಃ ಹೇಳಿಕೊಂಡು ಚಿತ್ರರಂಗಕ್ಕೆ ಪ್ರವೇಶಿಸಿದರೂ ನಟನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಕಾಣಿಸಿಕೊಂಡ ಚಿತ್ರಗಳ ಮೂಲಕ ನಾನು ವೃತ್ತಿಯಲ್ಲಿರುವ ಇಂಡಸ್ಟ್ರಿಯಲ್ಲೇ ಗುರುತಿಸಿಕೊಂಡ ವ್ಯಕ್ತಿ ಎನ್ನುವ ಕಾರಣಕ್ಕಾಗಿ ಹಾಗು ಮಾನವೀಯತೆಯ ದೃಷ್ಟಿಯಿಂದ ಮಾಧ್ಯಗಳಲ್ಲಿ ಒಂದು ಮನವಿ ಮಾಡುತ್ತಿದ್ದೇನೆ.

HUCCHA VENKAT 1

ಈ ವಿಚಾರದಲ್ಲಿ ಮಾಧ್ಯಮಗಳಲ್ಲಿ ವಿನಂತಿಸಲು ಕಾರಣ ಒಂದೇ. ಆತನನ್ನು ಇಂದು ರಾಜ್ಯದ ಜನತೆ ನಟನಾಗಿ ಗುರುತಿಸುವುದಕ್ಕಿಂತ ಹೆಚ್ಚು ಮಾಧ್ಯಮಗಳಲ್ಲಿನ ಚರ್ಚೆಗಳ ಮೂಲಕ ಗುರುತಿಸಿದ್ದಾರೆ. ಆದರೆ ಇಂದು ಆತನಿಗೆ ಹೊಡೆದು ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆ. ಇದೂವರೆಗೆ ಆತನ ವರ್ತನೆಯನ್ನು ಕಂಡಿರುವ ನಮಗೆ ಮತ್ತು ವೈದ್ಯರು ಕೂಡ ಈಗಾಗಲೇ ನೀಡಿರುವ ಹೇಳಿಕೆಗಳ ಪ್ರಕಾರ ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆಯ ಅಗತ್ಯ ಇದೆಯೇ ಹೊರತು, ಹೊಸ ಚರ್ಚೆ, ಮಾತುಕತೆ, ಹೊಡೆದಾಟಗಳಲ್ಲ. ಇದನ್ನು ಚೆನ್ನಾಗಿ ಅರಿಯಬಲ್ಲ ಮಾಧ್ಯಮಗಳೇ ಈ ಬಾರಿ ಕೂಡ ಆತನಿಗೆ ದಯಮಾಡಿ ಸಹಾಯ ಮಾಡಿ. ಆತನ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯಿಂದ ಜಾರಿಕೊಳ್ಳದ ಹಾಗೆ ಕಾಳಜಿ ವಹಿಸಿ ಎಂದು ನನ್ನ ಮನವಿ ಎಂದಿದ್ದಾರೆ.

Huccha Venkat copy

ಇದೇ ಸಂದರ್ಭದಲ್ಲಿ ಆತನಿಗೆ ಹಲ್ಲೆಗೈದು ವಿಡಿಯೋ ಮಾಡುವವರಲ್ಲಿ ಕೂಡ ಒಂದು ಮನವಿ. ಬದುಕು ಯಾರ ಕೈಯಲ್ಲಿಯೂ ಇಲ್ಲ. ಇಂದು ಒಬ್ಬ ರಾಜ ಭಿಕ್ಷೆ ಬೇಡಬಹುದು. ಅದೇ ಭಿಕ್ಷುಕ ನಾಳೆ ರಾಜನಾಗಬಹುದು. ನಾವು ಅವರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವುದು ಮಾನವೀಯತೆಯಲ್ಲ. ಹಾಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಯಲ್ಲಿ ದಯವಿಟ್ಟು ಯಾರೂ ಹಲ್ಲೆ ಮಾಡಬೇಡಿ ಎಂದು ಕಳಕಳಿಯಿಂದ ವಿನಂತಿಸುವುದಾಗಿ ಬರೆದುಕೊಂಡಿದ್ದಾರೆ.

HUCHHA VENKAT copy

ನಡೆದಿದ್ದೇನು?
ಕಳೆದ ಕೆಲ ದಿನಗಳಿಂದ ಹುಚ್ಚ ವೆಂಕಟ್ ಶ್ರೀರಂಗಪಟ್ಟಣದಲ್ಲೇ ಅಲೆದಾಡುತ್ತಿದ್ದು, ಕಬ್ಬಿನ ಜ್ಯೂಸ್ ಕುಡಿದು ಹಣ ನೀಡದೆ ರಂಪಾಟ ಮಾಡಿದ್ದ. ಅಷ್ಟೇ ಅಲ್ಲದೇ ಜ್ಯೂಸ್ ಅಂಗಡಿಯವನ ಮೇಲೆ ಕೈ ಮಾಡಿದ್ದನು. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ವೆಂಟಕ್ ಗೆ ಧರ್ಮದೇಟು ನೀಡಿದ್ದಾರೆ. ವೆಂಟಕ್ ಗೆ ಥಳಿಸುತ್ತಿರುವುದನ್ನು ಸ್ಥಳದಲ್ಲಿ ಸೇರಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಇದನ್ನೂ ಓದಿ: ಹುಚ್ಚ ವೆಂಕಟ್ ಸ್ಥಿತಿಗೆ ಮರುಗಿದ ಜಗ್ಗೇಶ್

Share This Article
Leave a Comment

Leave a Reply

Your email address will not be published. Required fields are marked *