ಬೆಂಗಳೂರು: ಬಿಜೆಪಿ ಪಕ್ಷದ ಸಾಫ್ಟ್ ಕಾರ್ನರ್ ಗಿಂತ ರಾಜ್ಯದ ಜನರ ಪರಿಸ್ಥಿತಿ ಬಗ್ಗೆ ಚಿಂತನೆಯಾಗಿದೆ. ನಾನು ತಾಳ್ಮೆಯಿಂದ ಕಾಯುತ್ತೇನೆ. ಆದರೆ ಬಣ್ಣ ಬದಲಿಸುವ ಊಸರವಳ್ಳಿ ನಾನಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಾ ಹೆಚ್ಡಿಕೆ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ನಾನು ಯಾರ ಕಡೆಯೂ ಇಲ್ಲ. ಬಿಜೆಪಿ ಕಡೆಯೂ ಇಲ್ಲ, ಕಾಂಗ್ರೆಸ್ ಕಡೆಯೂ ಇಲ್ಲ. ರಾಜಕೀಯ ಚಕ್ರವ್ಯೂಹ ಇದ್ದಂಗೆ. ಒಂದು ಬಾರಿ ಒಳ ಹೋದಾಗ ಭೇದಿಸುವುದು ಕಷ್ಟ. ಮನಿ ಇವತ್ತಿನ ರಾಜಕಾರಣದಲ್ಲಿ ಪ್ಲೇ ಮಾಡ್ತಿದೆ. ದುಡ್ಡು ಮಾಡು, ದುಡ್ಡು ಚೆಲ್ಲು ಎನ್ನುವಂತಿದೆ. ನಾನು ಮೌನವಾಗಿದ್ದುಕೊಂಡು ಬಿಜೆಪಿ ಸರ್ಕಾರ ಏನ್ ಮಾಡ್ತಾರೆ ಅಂತಾ ನೋಡುತ್ತಿದ್ದೇನೆ ಎಂದರು.
Advertisement
Advertisement
ಜಿ.ಟಿ.ದೇವೇಗೌಡರು ನಮ್ಮ ಪಕ್ಷದಿಂದ ಹೊರಗೆ ಕಾಲಿಟ್ಟಿದ್ದಾರೆ. ನಾನು ನೇರವಾಗಿಯೇ ಹೇಳ್ತಿದ್ದೇನೆ. ವಿದೇಶಕ್ಕೆ ಹೋಗಿದ್ದರಿಂದಲೇ ಸರ್ಕಾರ ಬಿತ್ತು ಅಂತ ಹೇಳಿದ್ರು. ಯಾರ್ಯಾರು ಮೀಟಿಂಗ್ ಮಾಡ್ತಿದ್ದಾರೆ ಅಂತ ಗೊತ್ತಿದೆ ಬಿಡಿ. ಚುನಾವಣೆ ಬಂದಾಗ ಬಿಜೆಪಿ, ಕಾಂಗ್ರೆಸ್ ವಿರುದ್ಧವೇ ನನ್ನ ಹೋರಾಟ, ರಾಜಿ ಇಲ್ಲ ಎಂದು ಹೇಳಿದರು.
Advertisement